Latest Kannada Nation & World
ಅದು ಸೈಲೆಂಟ್, ಇದು ವೈಲೆಂಟ್; ಎಕ್ಕ ಚಿತ್ರದಲ್ಲಿ ದೊಡ್ಮನೆ ಕುಡಿ ಯುವ ರಾಜಕುಮಾರ್ ರಕ್ತಪಾತ

ಇದು ಚಿತ್ರಮಂದಿರಗಳಿಗೆ ಮಾಡುತ್ತಿರುವ ಸಿನಿಮಾ
‘ಎಕ್ಕ’ ಚಿತ್ರವನ್ನು PRK ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್ ಮತ್ತು KRG ಸ್ಟುಡಿಯೋಸ್ ಅಡಿ ಅಶ್ವಿನಿ ಪುನೀತ್ ರಾಜಕುಮಾರ್, ಜಯಣ್ಣ, ಭೋಗೇಂದ್ರ, ಕಾರ್ತಿಕ್ ಗೌಡ ಮತ್ತು ಯೋಗಿ ಜೊತೆಯಾಗಿ ನಿರ್ಮಿಸುತ್ತಿರುವುದು ವಿಶೇಷ. ಚಿತ್ರದ ಕುರಿತು ಮಾತನಾಡುವ ಜಯಣ್ಣ, ಇದು ಚಿತ್ರಮಂದಿರಗಳಿಗೆ ಮಾಡುತ್ತಿರುವ ಸಿನಿಮಾ. ಹಾಗಂತ ಮಾರಲ್ಲ ಅಂತಲ್ಲ. ಚಾನಲ್ ಮತ್ತು ಒಟಿಟಿಯವರು ಬಂದು ಬಜೆಟ್ ಜಾಸ್ತಿ ಮಾಡಿಸಿ, ಇದೀಗ ಹಕ್ಕುಗಳನ್ನು ತಗೊಳ್ಳೋದು ಬಿಟ್ಟಿದ್ದಾರೆ. ಹಾಗಾಗಿ, ನಾವು ಚಿತ್ರಮಂದಿರಗಳನ್ನು ಮುಖ್ಯವಾಗಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ’ ಎಂದರು.