Latest Kannada Nation & World
ಅಧಿಕಾರ ಬಂದರೆ ಅಮೆರಿಕದ ಎಲ್ಲರ ಆದಾಯ ತೆರಿಗೆ ರದ್ದು; ಡೊನಾಲ್ಡ್ ಟ್ರಂಪ್ ಘೋಷಣೆ

ಆದಾಯ ತೆರಿಗೆ ರದ್ದತಿ ಸಾಧ್ಯವೇ?
ಬ್ರಾಂಕ್ಸ್ನ ಕ್ಷೌರಿಕ ಅಂಗಡಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಟ್ರಂಪ್, ಎಲ್ಲಾ ಸುಂಕದ ಯೋಜನೆಯನ್ನು ಸ್ಥಾಪಿಸುವ ಮೂಲಕ ಅಮರಿಕದ ಪ್ರತಿಯೊಬ್ಬ ನಾಗರಿಕರಿಗೆ ಫೆಡರಲ್ ಆದಾಯ ತೆರಿಗೆ ತೆಗೆದುಹಾಕಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನು ಹೇಗೆ ಸಾಧಿಸಬಹುದು ಎಂದು ಕೇಳಿದಾಗ, ಅವರು 1800ರ ತೆರಿಗೆ ವ್ಯವಸ್ಥೆ ಮರಳಿ ತರಲು ಸಲಹೆ ನೀಡಿದ್ದಾರೆ. ‘ನಿಮಗೆ ಗೊತ್ತಾ, 1890ರ ದಶಕದಲ್ಲಿ ಅಮೆರಿಕ ತುಲನಾತ್ಮಕವಾಗಿ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿತ್ತು. ಅಂದೇ ಎಲ್ಲಾ ಸುಂಕಗಳಿದ್ದವು. ಆದಾಯ ತೆರಿಗೆ ಇರಲಿಲ್ಲ ಎಂದಿದ್ದಾರೆ.