Latest Kannada Nation & World
ಅಪಾಯದಲ್ಲಿರುವ ಚಾರುವನ್ನು ಕಾಪಾಡಲು ಬಂದಿದ್ದಾನೆ ರಾಮಾಚಾರಿ; ರುಕ್ಕು ಮನೆಯಲ್ಲಿ ಏನಾಗಿದೆ ನೋಡಿ

ಚಾರುವನ್ನು ಹುಡುಕಿಕೊಂಡು ಯಾವುದೋ ಹೆಂಗಸು ಬಂದಿದ್ದಾಳೆ. ನೀನ್ಯಾಕೆ ನಾಟಕ ಮಾಡ್ತಾ ಇದ್ದೀಯಾ? ಈ ಹುಡುಗಿ ಯಾರೂ ಅಂತ ನಿನಗೆ ಗೊತ್ತು ತಾನೇ ಎಂದು ಆ ಹೆಂಗಸು ರುಕ್ಕುವನ್ನು ಪ್ರಶ್ನೆ ಮಾಡಿದ್ದಾಳೆ. ಆಗ ರುಕ್ಕು ಯಾರದು ಎಂದು ಮತ್ತೆ ಪ್ರಶ್ನೆ ಮಾಡುತ್ತಾಳ. “ನೀನು ಈ ರೀತಿ ಹೇಳ್ತೀಯಾ ಅಂತ ನನಗೆ ಮೊದಲೇ ಗೊತ್ತಿತ್ತು, ಅದಕ್ಕಾಗೇ ನಾನು ಅವಳ ಫೋಟೋ ಕೂಡ ತಂದಿದಿನಿ. ಅವಳು ಎಲ್ಲಿದಾಳೆ? ಅವಳು ಯಾರು ಅನ್ನೋದನ್ನು ನೀನು ಈಗ ಹೇಳಲೇಬೇಕು” ಎಂದು ಆ ಹೆಂಗಸು ಗದರುತ್ತಾಳೆ. ಆದ್ರೆ ಇದ್ಯಾವುದೂ ನನಗೆ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ರುಕ್ಕು ನಿಂತಿರುತ್ತಾಳೆ.