Latest Kannada Nation & World
ಅಪ್ಪ ಆದ ಖುಷಿಯಲ್ಲಿ ಸಿದ್ದೇಗೌಡ, ವಿಚಾರ ತಿಳಿದು ಆಶ್ಚರ್ಯ ವ್ಯಕ್ತಪಡಿಸಿದ ಸ್ನೇಹಿತರು; ಲಕ್ಷ್ಮೀ ನಿವಾಸ ಧಾರಾವಾಹಿ
ಖುಷಿ ಸ್ಕೂಲ್‌ಗೆ ಪೇರೆಂಟ್ ಮೀಟಿಂಗ್ ಹೋಗಲು ಖುಷಿಯಾದ ಸಿದ್ದು
ಭಾವನಾ, ಸಿದ್ದು ಇಬ್ಬರೂ ಖುಷಿಯನ್ನು ಭೇಟಿ ಆಗುತ್ತಾರೆ. ಪುಟ್ಟ ಖುಷಿಗೆ ಸಿದ್ದು ಐಸ್‌ಕ್ರೀಮ್ ಕೊಡಿಸುತ್ತಾನೆ. ನೀವಿಬ್ಬರೂ ಒಟ್ಟಿಗೆ ನನ್ನನ್ನು ಭೇಟಿ ಆಗಲು ಬಂದಿದ್ದೀರಿ, ಇಬ್ಬರೂ ಫ್ರೆಂಡ್ಸ್ ಆಗಿಬಿಟ್ರಾ ಎಂದು ಖುಷಿ ಕೇಳುತ್ತಾಳೆ. ಭಾವನಾ ಹೌದು ಎನ್ನುತ್ತಾಳೆ. ಇದನ್ನು ಕೇಳಿ ಸಿದ್ದು ಖುಷಿ ಆಗುತ್ತಾನೆ. ನಾನು ಒಂದು ವಿಚಾರ ಹೇಳುವುದನ್ನೇ ಮರೆತೆ. ಸ್ಕೂಲ್‌ನಲ್ಲಿ ಪೇರೆಂಟ್ಸ್ ಮೀಟಿಂಗ್ ಇದೆ, ಅಪ್ಪ ಅಮ್ಮ ಇಬ್ಬರೂ ಬರಬೇಕು ಎನ್ನುತ್ತಾಳೆ. ಸರಿ ನಾನು ಬರುವೆ ಎಂದು ಭಾವನಾ ಹೇಳಿದಾಗ, ನೀವು ಮಾತ್ರವಲ್ಲ ಸಿದ್ದು ಅಂಕಲ್ ಕೂಡಾ ಬರಬೇಕು ಎಂದು ಖುಷಿ ಹಟ ಹಿಡಿಯುತ್ತಾಳೆ. ಮಗುವಿನ ಮನಸ್ಸು ನೋಯಿಸಲು ಇಷ್ಟವಿಲ್ಲದೆ ಸಿದ್ದು ಸರಿ ನಾನೂ ಮೀಟಿಂಗ್ ಬರುವೆ ಎನ್ನುತ್ತಾನೆ. ಇದರಿಂದ ಖುಷಿಗೆ ಸಂತೋಷವಾದರೂ, ಭಾವನಾಗೆ ಇರಿಸುಮುರಿಸಾಗುತ್ತದೆ.