Latest Kannada Nation & World
ಅಪ್ಪ ನೋಡಿದ ಹುಡುಗ ಸುಬ್ಬು ಎಂಬ ಭ್ರಮೆಯಲ್ಲಿ ಶ್ರಾವಣಿ, ಊಟ–ನೀರು ಬಿಟ್ಟು ಸೊರಗಿದ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಮದನ್ ವರ್ತನೆ ಕಂಡು ಶ್ರಾವಣಿಗೆ ಶಾಕ್
ಅಪ್ಪ ತನಗೆ ಸುಬ್ಬು ಜೊತೆ ಮದುವೆ ಮಾಡುತ್ತಾರೆ ಎಂಬ ಭ್ರಮೆಯಲ್ಲೇ ಇರುವ ಶ್ರಾವಣಿ ತಿಳಿಯದೇ ಮದನ್‌ಗೆ ಡಿಕ್ಕಿ ಹೊಡೆಯುತ್ತಾಳೆ. ಆದರೆ ಎಂದಿನಂತೆ ವರ್ತಿಸದ ಮದನ್ ಮೃದುವಾಗಿ ಸಾರಿ ಶ್ರಾವಣಿ, ನೋವಾಯ್ತಾ ನಾನು ನೋಡಬೇಕಿತ್ತು ಎಂದು ಹೇಳಿ ಶ್ರಾವಣಿಗೆ ಅಚ್ಚರಿಯಾಗುವಂತೆ ಮಾಡುತ್ತಾನೆ. ಮದನ್ ವರ್ತನೆ ಕಂಡ ಶ್ರಾವಣಿ, ಇದೇನಪ್ಪಾ ಇದು ನರಿ ಇಲಿಯಾಗಿದೆ ಎಂದು ಮನಸ್ಸಿನಲ್ಲೇ ಅಂದುಕೊಂಡು ಪರ್ವಾಗಿಲ್ಲ ಬಿಡು, ನಾನು ನೋಡ್ಕೊಂಡು ಬರ್ಬೇಕಿತ್ತು ಅಂತ ಹೇಳಿ ಹೊರಡಲು ಸಿದ್ಧಳಾಗುತ್ತಾಳೆ. ಆದರೆ ಮದನ್, ಹಿಂದೆ ತಾನು ಮಾಡಿರುವುದಕ್ಕೆಲ್ಲಾ ಸಾರಿ ಎಂದು ಮುಗ್ಧನಂತೆ ಹೇಳುತ್ತಾನೆ. ಆದರೆ ಶ್ರಾವಣಿ ಅವನಿಗೆ ಶೇಕ್ ಹ್ಯಾಂಡ್ ಕೂಡ ಮಾಡದೇ ಹೊರಟು ಹೋಗುತ್ತಾಳೆ, ಇದರಿಂದ ಮದನ್‌ಗೆ ಅವಮಾನವಾದ್ರೂ ತಡೆದುಕೊಂಡು ‘ಶ್ರಾವಣಿ ಇನ್ನು ಸ್ವಲ್ಪ ದಿನ ನಿನಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ಇನ್ನು ಸ್ವಲ್ಪ ದಿನದಲ್ಲೇ ನಿನ್ನ ಕುತ್ತಿಗೆಗೆ ತಾಳಿ ಕಟ್ಟಿ ನಿನ್ನನ್ನು ಈ ಕೈ ಮುಷ್ಟಿಯಲ್ಲಿ ಇರಿಸಿಕೊಳ್ಳುತ್ತೇನೆ‘ ಎಂದು ಹೇಳಿ ಹೊರಡುತ್ತಾನೆ.