ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ನಟ ಗಣೇಶ್, ನಿರ್ದೇಶಕ ಶ್ರೀನಿವಾಸ್ ರಾಜು

ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ ಶತ ದಿನೋತ್ಸವದ ಸಂಭ್ರಮ: ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ನಟ ಗಣೇಶ್, ನಿರ್ದೇಶಕ ಶ್ರೀನಿವಾಸ್ ರಾಜು
ಇದು ‘ಎಚ್‌ಟಿ ಕನ್ನಡ’ ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Thu, 21 Nov 202403:29 PM IST
ಮನರಂಜನೆ News in Kannada Live:ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ ಶತ ದಿನೋತ್ಸವದ ಸಂಭ್ರಮ: ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ನಟ ಗಣೇಶ್, ನಿರ್ದೇಶಕ ಶ್ರೀನಿವಾಸ್ ರಾಜು
-
Krishnam Pranaya Sakhi 100 Days: ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ಗಣೇಶ್ ಹಾಗೂ ಮಾಳವಿಕಾ ನಾಯರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಶತ ದಿನೋತ್ಸವ ಆಚರಿಸುತ್ತಿದೆ. ಸಿನಿಮಾ ಇದೇ ವರ್ಷ ಆಗಸ್ಟ್ 15 ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು.
Thu, 21 Nov 202401:07 PM IST
ಮನರಂಜನೆ News in Kannada Live:‘ಕಟ್ಲೆ’ ಸಿನಿಮಾದ ಮೊದಲ ಸಾಂಗ್ ರಿಲೀಸ್ ಮಾಡಿದ ಡಾರ್ಲಿಂಗ್ ಕೃಷ್ಣ; ಸದ್ಯದಲ್ಲೇ ತೆರೆಗೆ ಬರಲಿದೆ ಚಿತ್ರ
- ಭರತ್ ಗೌಡ ನಿರ್ಮಾಣದ ಹಾಗೂ ಶ್ರೀವಿದ ನಿರ್ದೇಶನದ ಚಿತ್ರ ‘ಕಟ್ಲೆ’ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಈ ಸಿನಿಮಾದ ಮೊದಲ ಹಾಡನ್ನು ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿದ್ದಾರೆ. ಹಾಸ್ಯನಟನಾಗಿ ಜನಮನ ಗೆದ್ದಿರುವ ಕೆಂಪೇಗೌಡ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Thu, 21 Nov 202412:22 PM IST
ಮನರಂಜನೆ News in Kannada Live:ಇದು ರಾಷ್ಟ್ರಮಟ್ಟದ ಚರ್ಚೆ ಎಂದು ಗೊತ್ತಿರಲಿಲ್ಲ; ತನ್ನ ಉಡುಗೆ ಬಗ್ಗೆ ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ ಸ್ವರಾ ಭಾಸ್ಕರ್
- ನಟಿ ಸ್ವರಾ ಭಾಸ್ಕರ್ ಅವರ ಇತ್ತೀಚಿನ ವೈರಲ್ ಫೋಟೋದ ಬಗ್ಗೆ ಸ್ವರಾ ಭಾಸ್ಕರ್ ತಾವೇ ಸ್ವತಃ ರಿಯಾಕ್ಟ್ ಮಾಡಿದ್ದಾರೆ. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವ ವಿಷಯ ಎಂದು ಗೊತ್ತಿರಲಿಲ್ಲ ಎಂದಿದ್ದಾರೆ.
Thu, 21 Nov 202411:25 AM IST
ಮನರಂಜನೆ News in Kannada Live:ಒಂದೇ ದಿನ ಆರಂಭವಾಯಿತು ಹರಿ ಸಂತೋಷ್ ಸಾರಥ್ಯದ ಎರಡು ಚಿತ್ರ; ಸೆಟ್ಟೇರಿತು ‘ಡಿಸ್ಕೋ’ ಹಾಗೂ ‘ಕಂಗ್ರಾಜುಲೇಷನ್ಸ್ ಬ್ರದರ್’
- ನಿರ್ದೇಶಕ ಹರಿ ಸಂತೋಷ್ ಸಾರಥ್ಯದಲ್ಲಿ ಅವರದೇ ಎರಡು ಸಿನಿಮಾಗಳು ಸೆಟ್ಟೇರಿದೆ. ಶೂಟಿಂಗ್ ಕುಡ ಆರಂಭವಾಗಿದೆ. ‘ಡಿಸ್ಕೋ’ ಮತ್ತು ‘ಕಂಗ್ರಾಜುಲೇಷನ್ಸ್ ಬ್ರದರ್’ ಸಿನಿಮಾ ನಿರ್ಮಾಣ ಕಾರ್ಯ ಆರಂಭವಾಗಿದೆ.
Thu, 21 Nov 202410:24 AM IST
ಮನರಂಜನೆ News in Kannada Live:ರುದ್ರಾಭಿಷೇಕಂ ಚಿತ್ರದಲ್ಲಿ ವೀರಗಾಸೆ ಕಲಾವಿದನಾದ ವಿಜಯ್ ರಾಘವೇಂದ್ರ; ಇದು ವೀರಭದ್ರೇಶ್ವರ ದೇವರ ಹಿನ್ನೆಲೆಯ ಕಥೆ
- Rudrabhishekam Launched: ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಲಿರುವ ರುದ್ರಾಭಿಷೇಕಂ ಸಿನಿಮಾದ ಮುಹೂರ್ತ ನೆರವೇರಿದೆ. ಈ ಚಿತ್ರದಲ್ಲಿ ವೀರಗಾಸೆ ಕಲಾವಿದನಾಗಿ ಚಿನ್ನಾರಿ ಮುತ್ತ ಕಾಣಿಸಿಕೊಳ್ಳಲಿದ್ದಾರೆ.
Thu, 21 Nov 202409:54 AM IST
ಮನರಂಜನೆ News in Kannada Live:Bhairathi Ranagal: ಭೈರತಿ ರಣಗಲ್ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಮಫ್ತಿ 2 ಬಗ್ಗೆ ಸುಳಿವು ನೀಡಿದ ಶಿವರಾಜ್‌ಕುಮಾರ್, ಶೀಘ್ರದಲ್ಲಿ ಘೋಷಣೆ
- Bhairathi Ranagal: ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಶಿವರಾಜ್‌ಕುಮಾರ್ ನಟನೆಯ ಭೈರತಿ ರಣಗಲ್ ಚಿತ್ರಕ್ಕೆ ರಾಜ್ಯಾದ್ಯಂತ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಗೆದ್ದ ಖುಷಿಯಲ್ಲಿ ಇಡೀ ತಂಡ ಒಂದೆಡೆ ಸೇರಿತ್ತು. ಇದೇ ವೇಳೆ ಮಫ್ತಿ 2 ಸಿನಿಮಾದ ಬಗ್ಗೆಯೂ ಶಿವಣ್ಣ ಮಾಹಿತಿ ನೀಡಿದರು.
Thu, 21 Nov 202409:49 AM IST
ಮನರಂಜನೆ News in Kannada Live:ಕೂತ್ರೂ ಕಷ್ಟ, ನಿಂತ್ರೂ ಕಷ್ಟ, ಭಾವನಾ ಏನು ಮಾಡಿದ್ರೂ ಸಹಿಸದೆ ತಾಯಿ ಬಳಿ ಚಾಡಿ ಚುಚ್ಚಿದ ಸಿಂಚನಾ; ಲಕ್ಷ್ಮೀ ನಿವಾಸ ಧಾರಾವಾಹಿ
-
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್ 20ರ ಎಪಿಸೋಡ್‌ನಲ್ಲಿ ಐಟಿ ಅಧಿಕಾರಿಗಳಿಗೆ ಭಾವನಾಳೇ ಮಾಹಿತಿ ನೀಡಿರಬೇಕೆಂದು ಸಿಂಚನಾ ಅನುಮಾನ ವ್ಯಕ್ತಪಡಿಸುತ್ತಾಳೆ. ಅವಳು ಏನು ಮಾಡಿದರೂ ತಪ್ಪು ಎನ್ನುವಂತೆ ತಾಯಿ ರೇಣುಕಾ ಬಳಿ ಭಾವನಾ ಬಗ್ಗೆ ಇನ್ನಷ್ಟು ಬೇಸರ ಉಂಟಾಗುವಂತೆ ಮಾತನಾಡುತ್ತಾಳೆ.
Thu, 21 Nov 202409:06 AM IST
ಮನರಂಜನೆ News in Kannada Live:Drone Prathap: ಚಿತ್ರೋದ್ಯಮದಲ್ಲಿ ಹೆಜ್ಜೆ ಗುರುತು ಮೂಡಿಸಲು ಮುಂದಾದ ಡ್ರೋನ್ ಪ್ರತಾಪ್; ಆಂಜನೇಯನ ದೇಗುಲದಲ್ಲಿ ಬಿಗ್ ಅನೌನ್ಸ್‌ಮೆಂಟ್
- Drone Prathap: ಮಂಡ್ಯದ ಕೆ.ಆರ್ ಪೇಟೆ ತಾಲೂಕಿನ ಆಂಜನೇಯ ದೇವಸ್ಥಾನದಲ್ಲಿ ದೊಡ್ಡ ಘೋಷಣೆ ಮಾಡಿದ್ದಾರೆ ಬಿಗ್ ಬಾಸ್ ಕನ್ನಡ ಸೀಸನ್ 10ರ ಖ್ಯಾತಿಯ ಡ್ರೋನ್ ಪ್ರತಾಪ್. ಉದ್ಯಮದ ಜತೆಗೆ ಚಿತ್ರೋದ್ಯಮಕ್ಕೂ ಕಾಲಿರಿಸಿದ್ದಾರೆ ಪ್ರತು.
Thu, 21 Nov 202409:06 AM IST
ಮನರಂಜನೆ News in Kannada Live:Ramachari Serial: ಅಣ್ಣಾಜಿ ಮನೆಯ ಸಂಪೂರ್ಣ ವಿವರ ರಾಮಾಚಾರಿ ಅಜ್ಜಿ ಬಾಯಲ್ಲಿ; ರುಕ್ಕು ಹಾಗೂ ಕಿಟ್ಟಿ ಮನೆಗೆ ಮೊದಲಿಂದಲೇ ಇತ್ತಾ ಸಂಬಂಧ?
- ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಕುವನ್ನು ಅಣ್ಣಾಜಿ ಮನೆಯಿಂದ ಪಾರು ಮಾಡಿಕೊಂಡು ಬರಲು ಚಾರು ನಿರ್ಧರಿಸಿದ್ದಾಳೆ. ಆದರೆ ಅವಳ ನಿರ್ಧಾರಕ್ಕೆ ಸಹಕಾರ ನೀಡುವವರ ಸಂಖ್ಯೆ ಹೆಚ್ಚಾಗಿ ಅವಾಂತರ ಆಗಿದೆ.
Thu, 21 Nov 202407:32 AM IST
ಮನರಂಜನೆ News in Kannada Live:Kishkindha Kaandam Review: ಮೈನವಿರೇಳಿಸುವ ಮರೆವಿನ ಆಟ ಬಲು ಮನಮೋಹಕ! ಮಲಯಾಳಂನ ‘ಕಿಷ್ಕಿಂಧ ಕಾಂಡಂ’ ಒಟಿಟಿ ವಿಮರ್ಶೆ
- Kishkindha Kaandam OTT Review: ‘ಕಿಷ್ಕಿಂಧ ಕಾಂಡಂ’ ಸಿನಿಮಾ ಶುರುವಾಗಿ ಮೊದಲಾರ್ಧ ಯಾವುದೇ ಸುಳಿವೂ ವೀಕ್ಷಕನಿಗೆ ದಕ್ಕುವುದಿಲ್ಲ. ಕಥೆ ಲಯದಲ್ಲಿದ್ದರೂ ಚಿತ್ರದಲ್ಲಿನ ಪಾತ್ರಧಾರಿಗಳಿಗಾಗುವ ಭಯ, ಆತಂಕ, ವೀಕ್ಷಕನಿಗೂ ಆಗುತ್ತ ಹೋಗುತ್ತದೆ. ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ನಿವೃತ್ತ ಸೈನಿಕರು, ನಕ್ಸಲ್ ಚಟುವಟಿಕೆಗಳು ಕಥೆಯ ಜತೆಗೆ ಬೆರೆತುಕೊಂಡಿವೆ
Thu, 21 Nov 202407:14 AM IST
ಮನರಂಜನೆ News in Kannada Live:Bigg Boss Kannada 11: ಹಾಫ್ ಸೆಂಚುರಿ ಬಾರಿಸಿದ ಬಿಗ್ ಬಾಸ್ ಸ್ಪರ್ಧಿಗಳು; 50 ದಿನಗಳಲ್ಲಿ ಆಗಿದ್ದೇನು, ಸೃಷ್ಟಿಯಾದ ವಿವಾದಗಳೇನು?
- ಬಿಗ್ ಬಾಸ್ ಸೀಸನ್ 11: 50 ದಿನಗಳನ್ನು ಪೂರೈಸಿದೆ. ಇಷ್ಟು ದಿನಗಳಲ್ಲಿ ನಾನಾ ರೀತಿಯ ಬದಲಾವಣೆಗಳು ಹಾಗೂ ಎಷ್ಟೋ ವಿವಾದಗಳು ನಡೆದಿದೆ. ಜನರು ನೋಡಿ ಖುಷಿ ಪಟ್ಟದ್ದೂ ಇದೆ. ಬಿಗ್ ಬಾಸ್ ಶೋಗೆ ಬೈದದ್ದೂ ಇದೆ. 50 ದಿನಗಳ ಹೈಲೈಟ್ಸ್ ಇಲ್ಲಿದೆ.
Thu, 21 Nov 202406:08 AM IST
ಮನರಂಜನೆ News in Kannada Live:Lakshmi Baramma: ವೈಷ್ಣವ್ ಎದುರೇ ಬಯಲಾಯ್ತು ಸತ್ಯ; ಕಾವೇರಿ ಮಾಡಿದ ಕೆಟ್ಟ ಕೆಲಸದ ಬಗ್ಗೆ ಎಲ್ಲರ ಮುಂದೆ ಸಾಕ್ಷಿ ಸಮೇತ ಮಾತನಾಡಿದ ಕೀರ್ತಿ
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಎಲ್ಲರೂ ಕೀರ್ತಿ ಸತ್ತಿದ್ದಾಳೆ ಎಂದೇ ಅಂದುಕೊಂಡಿದ್ದರು. ಆದರೆ ಕೀರ್ತಿ ಬದುಕಿದ್ದಾಳೆ ಎನ್ನುವ ಸತ್ಯ ಈಗ ಎಲ್ಲರಿಗೂ ಗೊತ್ತಾಗಿದೆ. ಕಾವೇರಿ ಮಾಡಿದ ಕೆಟ್ಟ ಕೆಲಸಗಳ ಬಗ್ಗೆ ಈಗ ಕೀರ್ತಿ ಸಾಕ್ಷಿಯನ್ನೂ ತಂದಿದ್ದಾಳೆ.
Thu, 21 Nov 202405:37 AM IST
ಮನರಂಜನೆ News in Kannada Live:Malayalam OTT: ಒಟಿಟಿಗೆ ಬರ್ತಿದೆ ಮಲಯಾಳಂನ ಐ ಆಮ್ ಕಾದಲನ್ ಸಿನಿಮಾ; ಸೈಬರ್ ಕ್ರೈಂ ಕಥೆಯಲ್ಲಿ ಪ್ರೇಮಲು ಹೀರೋ ನಸ್ಲೀನ್
-
Malayalam OTT: ಪ್ರೇಮಲು ಖ್ಯಾತಿಯ ನಸ್ಲೀನ್ ಅವರ ‘ಐ ಆಮ್ ಕಥಾಲಾನ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಒಂದು ತಿಂಗಳೊಳಗೆ ಒಟಿಟಿಗೆ ಬರಲು ಸಜ್ಜಾಗಿದೆ. ಈ ಚಿತ್ರವು ಡಿಸೆಂಬರ್ ಮೊದಲ ವಾರದಲ್ಲಿ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಈ ಚಿತ್ರವು ಸೈಬರ್ ಕ್ರೈಮ್ ಥ್ರಿಲ್ಲರ್ ಎಳೆಯ ಕಥೆ ಹೊಂದಿದೆ.
Thu, 21 Nov 202405:15 AM IST
ಮನರಂಜನೆ News in Kannada Live:ಸುಧಾ ಬಳಿ ಕಾಫಿ ಕೇಳಿದ ಅಪೇಕ್ಷಾಳಿಗೆ ಮುಖಭಂಗ, ದಿವಾನ್ ಮನೆಯಲ್ಲಿ ನಿಗೂಢ ಸಂಚಿನ ಕಾರ್ಮೋಡ – ಅಮೃತಧಾರೆ ಗುರುವಾರದ ಸಂಚಿಕೆ
- ಅಮೃತಧಾರೆ ಧಾರಾವಾಹಿಯ ಗುರುವಾರದ ಸಂಚಿಕೆಯಲ್ಲಿ (ನವೆಂಬರ್ 21) ಎಂದಿನಂತೆ ಕೆಲವೊಂದು ಘಟನೆಗಳು ನಡೆದಿವೆ. ಆದರೆ, ಮಹತ್ವದ ಯಾವುದೇ ಘಟನೆ ನಡೆದಿಲ್ಲ. ಗೌತಮ್ ಮನೆಯಲ್ಲಿ ಸುಧಾ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ. ಆದರೆ, ಆಕೆ ನಿಗೂಢ ವ್ಯಕ್ತಿಯ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾಳೆ.
Thu, 21 Nov 202405:13 AM IST
ಮನರಂಜನೆ News in Kannada Live:Annayya Serial: ದಿನವೂ ಸಿದ್ದಾರ್ಥ್ ಜಪ ಮಾಡುತ್ತಿರುವ ಪಾರು; ಸತ್ಯ ಗೊತ್ತಿದ್ದರೂ ಹೇಳಲಾಗದ ಶಿವು
- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಶಿವು ಇಬ್ಬರೂ ತಮ್ಮ ಜೀವನದ ಬಗ್ಗೆ ಮಾತನಾಡಿಕೊಳ್ಳುತ್ತಾ ಇದ್ದಾರೆ. ಶಿವುಗೆ ತುಂಬಾ ಭಯ ಆಗುತ್ತಿದೆ. ಅವನ ಮನಸಿನಲ್ಲಿ ಸಿದ್ದಾರ್ಥ್ ಬಗ್ಗೆ ನೂರಾರು ಆಲೋಚನೆ ಬರುತ್ತಿದೆ. ಆದರೆ ಯಾವುದನ್ನೂ ಹೇಳಿಕೊಳ್ಳುವ ಹಾಗಿಲ್ಲ.
Thu, 21 Nov 202404:10 AM IST
ಮನರಂಜನೆ News in Kannada Live:Friday Movies: ಮಾರ್ಟಿನ್, ಬಘೀರ, ರಣಗಲ್ ಬಳಿಕ ಹೆಚ್ಚಿದ ಟ್ರಾಫಿಕ್! ಈ ವಾರ ಚಿತ್ರಮಂದಿರಗಳಲ್ಲಿ ಕನ್ನಡದ ಸಪ್ತ ಸಿನಿಮಾಗಳ ‘ದರ್ಶನ’
- Movies in Theatres this Week: ಈ ವಾರ ಕನ್ನಡದಲ್ಲಿ ಒಟ್ಟು ಏಳು ಸಿನಿಮಾಗಳು ತೆರೆಗೆ ಬರುತ್ತಿವೆ. ಕಾಮಿಡಿ, ಸಸ್ಪೆನ್ಸ್, ಆಕ್ಷನ್ ಸಿನಿಮಾಗಳ ಜತೆಗೆ ನಟ ದರ್ಶನ್ ಅವರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಅತ್ಯಾಧುನಿಕ ತಂತ್ರಜ್ಞಾನದ ಜತೆಗೆ ಮರು ಬಿಡುಗಡೆ ಆಗುತ್ತಿದೆ. ಹಾಗಾದರೆ, ಈ ವಾರ ಬಿಡುಗಡೆ ಆಗಲಿರುವ ಸಿನಿಮಾಗಳುಯ ಯಾವವು? ಇಲ್ಲಿದೆ ಪಟ್ಟಿ.
Thu, 21 Nov 202403:01 AM IST
ಮನರಂಜನೆ News in Kannada Live:Bagheera OTT: ಕೇವಲ ಮೂರೇ ವಾರಕ್ಕೆ ಒಟಿಟಿಗೆ ಗ್ರ್ಯಾಂಡ್ ಎಂಟ್ರಿಕೊಟ್ಟ ಬಘೀರ; ಯಾವ ಒಟಿಟಿಯಲ್ಲಿ ವೀಕ್ಷಣೆ?
- Bagheera OTT: ಶ್ರೀಮುರಳಿ ನಾಯಕನಾಗಿ ನಟಿಸಿ, ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಸೂಪರ್ ಹೀರೋ ಪರಿಕಲ್ಪನೆಯ ಬಘೀರ ಸಿನಿಮಾ ಒಟಿಟಿಗೆ ಆಗಮಿಸಿದೆ. ಚಿತ್ರಮಂದಿರದಲ್ಲಿ ಬಿಡುಗಡೆಯಾದ ಕೇವಲ 3 ವಾರಕ್ಕೆ ಒಟಿಟಿ ಅಂಗಳ ತಲುಪಿದೆ ಈ ಸಿನಿಮಾ.
Thu, 21 Nov 202401:47 AM IST
ಮನರಂಜನೆ News in Kannada Live:Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ರಜತ್ ರಂಪಾಟ; ಗೋಲ್ಡ್ ಸುರೇಶ್‌ಗೆ ಬೈದು ಬೀಪ್ ಹಾಕಿಸಿಕೊಂಡ ಹೊಸ ಸ್ಪರ್ಧಿ
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಬೀಪ್ ಮಾತುಗಳು ಮತ್ತೆ ರಿಂಗಣಿಸುತ್ತಿವೆ. ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಆಗಮಿಸಿದ್ದ ರಜತ್ ಕಿಶನ್, ಟಾಸ್ಕ್ ವೇಳೆ ಗೋಲ್ಡ್ ಸುರೇಶ್ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ್ದಾರೆ. ರಜತ್ ಮಾತಿಗೆ ಬೇಸರ ಹೊರಹಾಕಿದ ಸುರೇಶ್, ಮನೆಯಿಂದ ಹೊರ ನಡೆವ ನಿರ್ಧಾರ ಮಾಡಿದ್ದಾರೆ.