Latest Kannada Nation & World
ಅಮೆರಿಕ ಪ್ರಯಾಣಕ್ಕೆ 41 ದೇಶಗಳ ಮೇಲೆ ನಿಷೇಧ ಹೇರಲು ಮುಂದಾದ ಟ್ರಂಪ್ ಸರ್ಕಾರ; ಪಟ್ಟಿಯಲ್ಲಿರುವ ರಾಷ್ಟ್ರಗಳಿವು

ಸದ್ಯ ಮೆಮೋದಲ್ಲಿ 41 ದೇಶಗಳನ್ನು ಸಂಭಾವ್ಯ ಪ್ರಯಾಣ ನಿಷೇಧದ ಅಡಿಯಲ್ಲಿ ಮೂರು ವರ್ಗಗಳಲ್ಲಿ ಪಟ್ಟಿ ಮಾಡಲಾಗಿದೆ. ಪೂರ್ಣ ವೀಸಾ ಅಮಾನತು, ಭಾಗಶಃ ವೀಸಾ ಅಮಾನತು ಮತ್ತು ಭಾಗಶಃ ಅಮಾನತು. ಇದರಲ್ಲಿ ಎರಡನೆಯದ್ದು(ಭಾಗಶಃ ವೀಸಾ ಅಮಾನತು) ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ಕೆಲವು ರೀತಿಯ ವೀಸಾಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ‘ಕೊರತೆಗಳನ್ನು’ ಪರಿಹರಿಸದಿದ್ದರೆ ಅಂತಹ ದೇಶಗಳಿಗೆ ಭಾಗಶಃ ಅಮಾನತು ಅನ್ವಯವಾಗಲಿದೆ.