Latest Kannada Nation & World
ಅಲ್ಲು ಅರ್ಜುನ್ ಪುಷ್ಪ 2 ಒಟಿಟಿ ಬಿಡುಗಡೆ ಯಾವಾಗ, ಯಾವ ಒಟಿಟಿಯಲ್ಲಿ? ಹೀಗಿದೆ ನಿರೀಕ್ಷಿತ ದಿನಾಂಕ

Pushpa 2 OTT Release Date: ಪುಷ್ಪ 2: ದಿ ರೂಲ್ ಕಳೆದ ತಿಂಗಳ ಡಿಸೆಂಬರ್ 5ರಂದು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿತ್ತು. ದಾಖಲೆಯ ಕಲೆಕ್ಷನ್ ಮಾಡಿದ್ದ ಈ ಸಿನಿಮಾ, ಚಿತ್ರಮಂದಿರ, ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ಪ್ರದರ್ಶನ ಮುಂದುವರಿಸಿದೆ. ಜಾಗತಿಕವಾಗಿ 1750 ಕೋಟಿ ಕಲೆಕ್ಷನ್ ಮಾಡಿದ್ದ ಈ ಸಿನಿಮಾ, ಈ ವರ್ಷದ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾ ಎನಿಸಿಕೊಂಡಿದೆ. ಹೀಗೆ ನೋಡುಗರಿಂದ ಮೆಚ್ಚುಗೆ ಪಡೆದ ಈ ಸಿನಿಮಾ ಅದ್ಯಾವಾಗ ಒಟಿಟಿಗೆ ಆಗಮಿಸಲಿದೆ ಎಂದು ಕಾಯುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಿರುವಾಗಲೇ ನಿರೀಕ್ಷಿತ ದಿನಾಂಕವೊಂದು ಹೊರಬಿದ್ದಿದೆ.