Latest Kannada Nation & World
ಅವಳನ್ನು ಭೇಟಿಯಾದಾಗ ತಾಜಾ ಗಾಳಿಯಂತೆ ಹಿತವಾಗುತ್ತಿತ್ತು ಎಂದ ನಾರಾಯಣ ಮೂರ್ತಿ, ನನ್ನ ತಂದೆಯವರನ್ನು ಮೆಚ್ಚಿಸಲು ವಿಫಲರಾದ್ರು ಅಂದ ಸುಧಾ ಮೂರ್ತಿ

ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಬಗ್ಗೆ
ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರು ತಂತ್ರಜ್ಞಾನ, ವ್ಯಾಪಾರ ಮತ್ತು ಲೋಕೋಪಕಾರಕ್ಕೆ ನೀಡಿದ ಕೊಡುಗೆಗಳಿಂದ ಜನಪ್ರಿಯತೆ ಪಡೆದಿದ್ದಾರೆ. ಜಗತ್ತಿನ ಪ್ರಮುಖ ಐಟಿ ಸೇವಾ ಸಂಸ್ಥೆ ಇನ್ಫೋಸಿಸ್‌ನ ಸಹ ಸ್ಥಾಪಕರಲ್ಲಿ ನಾರಾಯಣಮೂರ್ತಿ ಒಬ್ಬರು. ಇದು ಭಾರತದ ಟೆಕ್ ಜಗತ್ತನ್ನು ಶ್ರೀಮಂತಗೊಳಿಸಿತು. ಇದೇ ಸಂದರ್ಭದಲ್ಲಿ ಸುಧಾಮೂರ್ತಿ ತನ್ನ ಸಮಾಜಸೇವೆ, ಬರಹ, ಇನ್ಫೋಸಿಸ್ ಫೌಂಡೇಶನ್ ಕಾರ್ಯಗಳಿಂದ ಜನಪ್ರಿಯತೆ ಪಡೆದಿದ್ದಾರೆ. ಇವು ಭಾರತದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಸುಧಾಮೂರ್ತಿ ಪುಸ್ತಕಗಳು ನಿಜ ಜೀವನದ ಕಥೆಗಳಿಂದ ಸ್ಪೂರ್ತಿ ಪಡೆದಿವೆ. ಸುಧಾಮೂರ್ತಿಯವರು ಅಗರ್ಭ ಶ್ರಿಮಂತರಾಗಿದ್ದರೂ ತಮ್ಮ ಸರಳ, ಸಜ್ಜನಿಕೆ, ನಡೆ, ನುಡಿಯಿಂದ ಹೆಸರುವಾಸಿಯಾಗಿದ್ದಾರೆ. ಶಿಕ್ಷಣತಜ್ಞೆ, ಲೇಖಕಿ ಮತ್ತು ಸಮಾಜ ಸೇವಕಿ ಸುಧಾಮೂರ್ತಿ ಅವರು ಅನೇಕರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.