Latest Kannada Nation & World
ಅಶ್ವಿನಿ ಪುನೀತ್ ರಾಜ್ಕುಮಾರ್ ಮೇಲೆ ನಿಲ್ಲದ ಕೆಟ್ಟಪದಗಳ ಬಳಕೆ; ಗಟ್ಟಿನಿರ್ಧಾರಕ್ಕೆ ಬದ್ಧರಾದ ಅಪ್ಪು ಫ್ಯಾನ್ಸ್

Ashwini Puneeth Rajkumar: ಇತ್ತೀಚಿನ ದಿನಗಳಲ್ಲಿ ಫ್ಯಾನ್ಸ್ ವಾರ್ ತೀರಾ ವಿಕೋಪಕ್ಕೆ ಹೋದ ಉದಾಹರಣೆಗಳಿವೆ. ಬೇರೆ ಬೇರೆ ಭಾಷೆಗಳಲ್ಲಿ ಅಷ್ಟೇ ಅಲ್ಲದೆ, ಕರ್ನಾಟಕದಲ್ಲಿ ಸ್ಯಾಂಡಲ್ವುಡ್ ಸ್ಟಾರ್ ಹೀರೋಗಳ ಫ್ಯಾನ್ಸ್ ನಡುವೆ ಆಗಾಗ ಈ ವಾರ್ಗಳು ನಡೆಯುತ್ತಲೇ ಇರುತ್ತವೆ. ನೇರವಾಗಿ ಸ್ಟಾರ್ ನಟರ ಎಂಟ್ರಿಯಾಗದಿದ್ದರೂ, ಅವರ ಅಭಿಮಾನಿಗಳೇ ಕಿಡಿ ಹೊತ್ತಿಸಿ, ಕಾಳ್ಗಿಚ್ಚಾಗಿ ಮಾಡಿದ್ದೂ ಇದೆ. ಹೀಗಿರುವಾಗಲೇ ದರ್ಶನ್ ಫ್ಯಾನ್ಸ್ ಮತ್ತೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಮಾನಹಾನಿಗೆ ಮುಂದಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಲ ಕೆಟ್ಟಪದಗಳ ಮೂಲಕ ನಿಂದನೆ ಮಾಡಿದ ಪೋಸ್ಟ್ಗಳು ವೈರಲ್ ಆಗುತ್ತಿವೆ. ಇದನ್ನು ಕಂಡ ಅಪ್ಪು ಫ್ಯಾನ್ಸ್ ಗಟ್ಟಿನಿರ್ಧಾರಕ್ಕೆ ಬಂದಿದ್ದಾರೆ.