Latest Kannada Nation & World
ಆನ್‌ಲೈನ್‌ನಲ್ಲಿ 75 ಸಾವಿರ ಟಿಕೆಟ್ ಮಾರಾಟವಾಗುವ ಮೂಲಕ ದಾಖಲೆ ಬರೆದ ಉಪೇಂದ್ರ ಯುಐ ಸಿನಿಮಾ: ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದ ಚಿತ್ರತಂಡ
ಲಹರಿ ಫಿಲ್ಮ್ಸ್ ಹಾಗೂ ವೀನಸ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಯುಐ ಚಿತ್ರವನ್ನು ಜಿ ಮನೋಹರನ್ ಹಾಗೂ ಕೆಪಿ ಶ್ರೀಕಾಂತ್ ನಿರ್ಮಿಸಿದ್ದಾರೆ. ಉಪೇಂದ್ರ ಚಿತ್ರಕ್ಕೆ ನಿರ್ದೇಶನ ಮಾಡಿ, ನಾಯಕನಾಗಿಯೂ ನಟಿಸಿದ್ದಾರೆ. ಉಪ್ಪಿಗೆ ಜೊತೆಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್, ಲಹರಿ ವೇಲು, ಜಿ ರಮೇಶ್, ಜಿ ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಸಹ ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಈಗಾಗಲೇ ಟ್ರೋಲ್ ಹಾಡು ಬಹಳ ವೈರಲ್ ಆಗಿದೆ. ಕೆವಿನ್ ಪ್ರೊಡಕ್ಷನ್ಸ್ ಬ್ಯಾನರ್ ರಾಜ್ಯಾದ್ಯಂತ, ಚಿತ್ರವನ್ನು ಹಂಚಿಕೆ ಮಾಡಿದೆ.