Latest Kannada Nation & World
ಚೆನ್ನೈ ಏರ್ ಶೋ ದುರಂತದಲ್ಲಿ ಐವರು ಸಾವು, 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು; ಅಸಲಿಗೆ ಆಗಿದ್ದೇನು?

ಚೆನ್ನೈ: ಭಾರತೀಯ ವಾಯುಪಡೆಯ (Indian Air Force) ವೈಮಾನಿಕ ಪ್ರದರ್ಶನ (Air Show) ಕಣ್ತುಂಬಿಕೊಳ್ಳಲು ಅಕ್ಟೋಬರ್ 6ರ ಭಾನುವಾರ ಚೆನ್ನೈನ ಮರೀನಾ ಬೀಚ್ನಲ್ಲಿ ನೆರೆದಿದ್ದ ಪ್ರೇಕ್ಷಕರ ಸಮುದ್ರದಲ್ಲಿ ಘೋರ ದುರಂತವೊಂದು ನಡೆದಿದೆ. ಐವರು ಸಾವನ್ನಪ್ಪಿದ್ದು, 200ಕ್ಕೂ (ಕುಸಿದು ಬಿದ್ದವರು, ಅಸ್ವಸ್ಥರಾದವರು, ಗಾಯಗೊಂಡವರು) ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಆಯಾಸದಿಂದ ಸಾವು ಸಂಭವಿಸಿದೆ ಎಂದು ವರದಿಯಾಗಿದೆ. ಕಳಪೆ ಯೋಜನೆ, ಸಂಚಾರ ಯೋಜನೆ ಕೊರತೆ, ಅಸಮರ್ಪಕ ಸಾರ್ವಜನಿಕ ಸಾರಿಗೆಯಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.