Latest Kannada Nation & World
ನುಡಿದಂತೆ ನಡೆದ ಡಾಲಿ; ಭೈರತಿ ರಣಗಲ್ ಗೆಟಪ್‌ನಲ್ಲಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ ನಟ ಧನಂಜಯ್

ನರ್ತನ್ ನಿರ್ದೇಶನದ ಸಿನಿಮಾ
ಇನ್ನು ಮಫ್ತಿ ಚಿತ್ರದಲ್ಲಿ ಶ್ರೀಮುರಳಿ ಇನ್ಸ್‌ಪೆಕ್ಟರ್ ಗಣ ಪಾತ್ರದಲ್ಲಿ ನಟಿಸಿದ್ದರು. ಭೈರತಿ ರಣಗಲ್ ಚಿತ್ರದಲ್ಲಿ ಅವರೂ ಇರಲಿದ್ದಾರಾ ಎಂಬ ಪ್ರಶ್ನೆಗೆ ಶಿವಣ್ಣ ಉತ್ತರ ಕೊಟ್ಟಿದ್ದಾರೆ. ಶ್ರೀಮುರಳಿ ಫ್ಲಾಷ್‌ಬ್ಯಾಕ್‌ನಲ್ಲಿ ಬರ್ತಾರೆ, ಈ ಸಿನಿಮಾದಲ್ಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭೈರತಿ ರಣಗಲ್ ಚಿತ್ರವನ್ನು ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶಿವಣ್ಣ ಪತ್ನಿ ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ಮಫ್ತಿ ಚಿತ್ರವನ್ನು ನಿರ್ದೇಶಿಸಿದ್ದ ನರ್ತನ್, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಶಿವರಾಜ್‌ಕುಮಾರ್, ಶ್ರೀಮುರಳಿ, ರುಕ್ಮಿಣಿ ವಸಂತ್, ರಾಹುಲ್ ಬೋಸ್, ನಾನಾ ಪಾಟೇಕರ್, ಯೋಗಿಬಾಬು, ಛಾಯಾಸಿಂಗ್, ದೇವರಾಜ್, ವಸಿಷ್ಠ ಸಿಂಹ ಹಾಗೂ ಇನ್ನಿತರರು ನಟಿಸಿದ್ದಾರೆ.