Astrology
ಇಂದು ಗುರು ರಾಘವೇಂದ್ರ ಸ್ವಾಮಿಗಳ ವರ್ಧಂತಿ; ವೆಂಕಟನಾಥರು ರಾಯರಾಗಿ ಬದಲಾಗಿದ್ದು ಹೇಗೆ ಎಂಬುದನ್ನು ತಿಳಿಯಿರಿ

ರಾಘವೇಂದ್ರ ಸ್ವಾಮಿಗಳ ವರ್ಧಂತಿ ಆಚರಣೆಯ ಸಂದರ್ಭದಲ್ಲಿ ರಾಯರಿಗೆ ಸಂಬಂಧಿಸಿದ ಮಂತ್ರಗಳ ಪಠಣವು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ. ಸ್ವಾಮಿಗಳಿಗೆ ವಿವಿಧ ಸಂಸ್ಥೆಗಳು ಇಂದು ಸತ್ಸಂಗಗಳು ಹಾಗೂ ಇತರೆ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಅನ್ನದಾನ, ನಿರ್ಗತಿಕರಿಗೆ ಸಹಾಯ, ಪ್ರಾಣಿ-ಪಕ್ಷಿಗಳಿಗೆ ಆಹಾರ, ನೀರು ನೀಡುವಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು, ರಾಯರು, ಗುರು ರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ.