Latest Kannada Nation & World
ಇದನ್ನೆಲ್ಲ ನೀನು ಜಯಿಸಿದ್ದೀಯಾ, ನಿನಗೆ ದೃಷ್ಟಿ ಬೀಳದೇ ಇರಲಿ; ನಟಿ ಸುಧಾರಾಣಿ ಹೀಗೆ ಯಾರ ಬಗ್ಗೆ ಹೇಳ್ತಿರಬಹುದು?

ಅವಳು ಜೀವನದಲ್ಲಿ ನೋಡಿದಂಥ ಏಳುಬೀಳುಗಳು, ಸುಖ ದುಃಖಗಳು, ನೋವು ನಲಿವುಗಳು ಎಲ್ಲವೂ ಈ ಸೀರೆಯಲ್ಲಿ ಕಾಣ್ತಿತ್ತು. ಅದೇ ರೀತಿ, ಅದೆಲ್ಲವನ್ನೂ ಮೀರಿ, ಕಷ್ಟಗಳನ್ನು ಗೆದ್ದು, ಅವಳು ಧೈರ್ಯವಾಗಿ ನಡೆದುಬಂದ ಪ್ರಯಾಣದ ಹಾದಿ ಕಾಣಿಸ್ತಾ ಇತ್ತು. “ಇದನ್ನೆಲ್ಲ ನೀನು ಜಯಿಸಿದ್ದೀಯಾ, ನಿನಗೆ ದೃಷ್ಟಿ ಬೀಳದೇ ಇರಲಿ” ಅಂತ ಈ ಸೃಷ್ಟಿ ಅಮ್ಮನಿಗೆ ಹೇಳ್ತಿರೋ ಸಂಕೇತವೇ ಈ ಸೀರೆಯಲ್ಲಿರೋ ಕಪ್ಪು ಬಣ್ಣದ ಸೆರಗು, ಕಪ್ಪು ಅಂಚು ಅನ್ನಿಸ್ತಾ ಇತ್ತು. ಈ ಸೀರೆ ಉಟ್ಟಾಗ ಅವಳೇ ನನ್ನನ್ನ ಅಪ್ಪಿಹಿಡಿದು ಮಡಿಲಲ್ಲಿ ಕೂರಿಸಿಕೊಂಡು ಅವಳ ಬದುಕಿನ ಅನುಭವದ ಪಾಠವನ್ನ ನನಗೆ ಕಲಿಸುತ್ತಿರೋ ಹಾಗೆ ಭಾಸವಾಯ್ತು. ಇಂಥದ್ದೊಂದು ವಿಶೇಷವಾದ ಸೀರೆ ಉಟ್ಟಾಗ ನನಗೆ ಅನ್ನಿಸಿದ್ದು ಒಂದೇ.. ಅಮ್ಮನ ಪ್ರೀತಿಯ ಮುಂದೆ, ಆ ಭಾವನೆಗಳ ಮುಂದೆ ಬೇರೆ ಯಾವುದೇ ಹೊಸ ಡಿಸೈನರ್ ಸೀರೆ ಆಗ್ಲಿ, ಬ್ರಾಂಡೆಡ್ ಬಟ್ಟೆ ಆಗ್ಲಿ ಸರಿಸಮವಲ್ಲ.. ಅಮ್ಮನ ಅಪ್ಪುಗೆಯ ಅನುಭವ ಕೊಡೋ ಸೀರೆ ಎದುರು ಇನ್ಯಾವುದು ನಿಲ್ಲೋದಿಲ್ಲ, ಬೆಲೆ ಬಾಳೋದಿಲ್ಲ” ಎಂದಿದ್ದಾರೆ.