Latest Kannada Nation & World
ಇದು ಸೈನ್ಸ್ ಫಿಕ್ಷನ್ ಅಲ್ಲ; ಪೇಸ್ ಮೇಕರ್ ಮೂಲಕ ಯಾರಿಗೂ ತಿಳಿಯದಂತೆ ಕೊಲ್ಲುವ ಹೊಸ ಯುದ್ಧದ ರಿಯಲ್ ಸ್ಟೋರಿ -ರಂಗಸ್ವಾಮಿ ಮೂಕನಹಳ್ಳಿ ಬರಹ

ನೀವು ಕೆಲಸ ಮಾಡುವ ಕಛೇರಿಯಲ್ಲಿ ಕಾಫಿ ವೆಂಡಿಂಗ್ ಮಷೀನ್ ಇದೆ ಎಂದುಕೊಳ್ಳಿ , ನಿತ್ಯವೂ ನೀವು ಬೆಳಗಿನ 10 ಗಂಟೆ 12 ನಿಮಿಷಕ್ಕೆ ನೀವು ಕಾಫಿ ಕುಡಿಯುತ್ತಿರಿ ಎಂದುಕೊಳ್ಳಿ , ಅಥವಾ ನಿಮಿಷ ಅತ್ತಿತ್ತ ಆದರೂ ಅಡ್ಡಿಯಿಲ್ಲ , ಕಾಫಿ ತೆಗೆದುಕೊಳ್ಳುತ್ತಿರುವವರು ನೀವೇ ಎನ್ನುವುದನ್ನು ಮಷೀನ್‌ನಲ್ಲಿರುವ ನಿಮ್ಮ ಅರಿವಿಗೆ ಎಂದೂ ಬಾರದ ಪುಟಾಣಿ ಕ್ಯಾಮರಾದ ಮೂಲಕ ನಿಕ್ಕಿ ಮಾಡಿಕೊಳ್ಳಲಾಗುತ್ತದೆ. ನಿಮ್ಮ ಕಾಫಿಯಲ್ಲಿ ನಿಮ್ಮ ದೇಹಕ್ಕೆ ಒಗ್ಗದ ಅತಿ ವೇಗವಾಗಿ ಅಲರ್ಜಿ ಆಗುವ ಪದಾರ್ಥವನ್ನ ಸೇರಿಸಲಾಗುತ್ತದೆ. ಮಜಾ ಎಂದರೆ ನಿಮ್ಮ ದೇಹಕ್ಕೆ ಅದು ಒಗ್ಗುವುದಿಲ್ಲ ಎನ್ನುವುದು ಕೆಲವೊಮ್ಮೆ ನಿಮಗೂ ಗೊತ್ತಿರುವುದಿಲ್ಲ! ಹೀಗೆ ಸುಲಭವಾಗಿ ನಿಮ್ಮನ್ನ ಇಲ್ಲವಾಗಿಸಿ ಬಿಡುತ್ತಾರೆ. ಕೇಸು ಇಲ್ಲ , ತಪಾಸಣೆಯೂ ಇಲ್ಲ . ಅದೊಂದು ಸಹಜ ಸಾವು ಎಂದು ದಾಖಲಾಗಿ ಹೋಗುತ್ತದೆ. ನೀವ್ಯಾರಿಗೆ ಅಡ್ಡಿಯಾಗಿದ್ದೀರೋ ಆತ ದೂರದಲ್ಲೆಲ್ಲೂ ಕುಳಿತು ಇನ್ನೊಬ್ಬರ ಸಾವಿಗೆ ಸ್ಕೆಚ್ ಹಾಕುತ್ತಿರುತ್ತಾನೆ/ಳೆ .