Latest Kannada Nation & World
ನನ್ನ ಮನಸ್ಸಲ್ಲಿ ಇರೋದು ನೀವೇ ಮೇಡಂ ಎಂದ ಸುಬ್ಬು, ಮತ್ತೆ ಅಪಾರ್ಥ ಮಾಡಿಕೊಂಡ ಶ್ರಾವಣಿ

ಸುಬ್ಬು ಮಾತು ಕೇಳಿ ಶ್ರಾವಣಿಗೆ ಅಚ್ಚರಿ
ಸುಬ್ಬು ಮನಸ್ಸಲ್ಲಿ ಇರುವ ಹುಡುಗಿ ಯಾರು ಎಂದು ತಿಳಿದುಕೊಳ್ಳಬೇಕು ಎಂದು ಯೋಚಿಸುತ್ತಿರುವ ಹೊತ್ತಿನಲ್ಲೇ ಶ್ರಾವಣಿ ಎದುರು ಬರುತ್ತಾನೆ ಸುಬ್ಬು. ಮೇಡಂ ಕೆಳಗಡೆ ಎಲ್ಲಾ ತಯಾರಿ ಆಗಿದೆ. ನಿಮಗಾಗಿ ಎಲ್ಲರೂ ಕಾಯುತ್ತಿದ್ದಾರೆ, ನೀವು ಬನ್ನಿ ಮೇಡಂ ಎಂದು ಕರೆಯಲು ಬರುತ್ತಾನೆ. ಆದರೆ ಶ್ರಾವಣಿ ಮಾತ್ರ ಸುಬ್ಬು ನಾನು ನಿನ್ನ ಜೊತೆ ಮಾತನಾಡಬೇಕು ಅಂತ ಹೇಳ್ತಾಳೆ. ಅಯ್ಯೋ ಮೇಡಂ, ನನ್ನ ಜೊತೆ ಈಗೇನು ಜೀವನಪೂರ್ತಿ ಮಾತನಾಡಬಹುದು. ಆದರೆ ಅಲ್ಲಿ ಮದುವೆ ಕೆಲಸಗಳಿಗೆ ತಡ ಆಗುತ್ತಿದೆ. ನೀವು ಬಂದರೆ ಮದುವೆ ಕಾರ್ಯಗಳು ಶುರು ಮಾಡಬಹುದು ಬನ್ನಿ ಹೋಗೋಣ ಅಂತಾನೆ. ಇದರಿಂದ ಕೋಪಗೊಳ್ಳುವ ಶ್ರಾವಣಿ ‘ಸುಬ್ಬು ನಾನು ಬಂದು ಪ್ರಶ್ನೆ ಕೇಳ್ತೀನಿ ಆ ಪ್ರಶ್ನೆಗೆ ಈಗಲೇ ಉತ್ತರ ಬೇಕು, ನೀನು ಯಾರನ್ನಾದರೂ ಪ್ರೀತಿ ಮಾಡ್ತಾ ಇದ್ದೀಯಾ, ನಿನ್ನ ಮನಸ್ಸಲ್ಲಿ ಇರೋದು ಯಾರ‘ ಎಂದು ಪ್ರಶ್ನೆ ಮಾಡ್ತಾಳೆ. ಅದಕ್ಕೆ ಸುಬ್ಬು ಮೇಡಂ, ಈ ಕ್ಷಣಕ್ಕೂ ನನ್ನ ಮನಸ್ಸಲ್ಲಿ ಇರೋದು ನೀವು, ನೀವು ಮಾತ್ರ‘ ಅಂತ ಹೇಳ್ತಾನೆ. ಸುಬ್ಬು ಉತ್ತರ ಶ್ರಾವಣಿಗೆ ಅಚ್ಚರಿ ಮೂಡಿಸುತ್ತದೆ.