Astrology
ಇಷ್ಟಾರ್ಥಗಳನ್ನು ನೆರೆವೇರಿಸುವ ನವನೀತೇಶ್ವರ ದೇವಾಲಯಕ್ಕೆ ನಿತ್ಯ ಬರುತ್ತೆ ಭಕ್ತರ ದಂಡು; ನಾಗಪಟ್ಟಣಂನ ಸಿಕ್ಕಲ್ ದೇವಾಲಯದ ಕಥೆ

ನವನೀತೇಶ್ವರ ದೇವಾಲಯದ ಇತಿಹಾಸ ಮತ್ತು ಇಂದಿನ ಅಲ್ಲಿನ ಭಕ್ತರು ನಂಬಿರುವಂತೆ ಕಥೆಯನ್ನು ನೋಡುವುದಾದರೆ, ಸ್ವರ್ಗಲೋಕದಲ್ಲಿ ಎಲ್ಲಾ ರೀತಿಯ ಅನುಕೂಲಗಳು ಇರುತ್ತವೆ. ದಿನನಿತ್ಯದ ಪೂಜೆಗಾಗಿ ಗೋವಿನ ಅವಶ್ಯಕತೆಯೂ ಸ್ವರ್ಗವಾಸಿಗಳಿಗೆ ಉಂಟಾಗುತ್ತದೆ. ಆಗ ಸಕಲ ದೇವತೆಗಳು ಬ್ರಹ್ಮನನ್ನು ತಮಗಿರುವ ಕೊರತೆಯನ್ನು ನೀಗಿಸಲು ಬ್ರಹ್ಮನಲ್ಲಿ ವಿನಂತಿಸಿಕೊಳ್ಳುತ್ತಾರೆ. ಇವರ ಮಾತಿಗೆ ಒಪ್ಪಿಗೆ ಸೂಚಿಸಿದ ಬ್ರಹ್ಮದೇವನು ದೇವತೆಗಳ ಪೂಜೆಗೆ ಗೋವನ್ನು ಸೃಷ್ಟಿ ಮಾಡುವುದಾಗಿ ತಿಳಿಸುತ್ತಾನೆ. ಆ ಕ್ಷಣದಲ್ಲಿ ಬ್ರಹ್ಮನ ಮುಖದಿಂದ ಗೋವಿನ ಜನನವಾಗುತ್ತದೆ. ಈ ಪವಿತ್ರ ಹಸುವೆ ಕಾಮಧೇನು. ಧಾರ್ಮಿಕ ಗ್ರಂಥಗಳ ಪ್ರಕಾರ ಇಂದಿಗೂ ಸಹ ಕಾಮಧೇನು ಜೀವಂತವಾಗಿದೆ ಎಂದು ಹೇಳಲಾಗಿದೆ. ಈ ಕಾಮಧೇನುವಿಗೆ ನಾಲ್ಕು ಮಕ್ಕಳಿರುತ್ತವೆ. ಆ ಮಕ್ಕಳೇ ಸುರೂಪ, ಹಂಸಿಕ, ಸುಮಧ್ರಾ ಮತ್ತು ಸರ್ವಕಾಮದುಘ. ಎಲ್ಲರೂ ತಿಳಿದಂತೆ ಕಾಮಧೇನುವಿನಲ್ಲಿ ಸಕಲ ದೇವತೆಗಳು ನೆಲೆಸಿದ್ದಾರೆ.