Latest Kannada Nation & World
ಇಸ್ರೋದಿಂದ ಇಂದು ಪ್ರೊಬಾ-3 ಉಡ್ಡಯನ, ಸೌರ ಕರೋನಾ ಅಧ್ಯಯನಕ್ಕೆ ಹೊಸ ಭರವಸೆ, ಇದು ಇಎಸ್‌ಎ ಮಿಷನ್

ಮಿಷನ್‌ನ ಉದ್ದೇಶ
ಆಕಲ್ಟರ್ ಬಾಹ್ಯಾಕಾಶ ನೌಕೆಯು ಸೌರ ಡಿಸ್ಕ್ ಅನ್ನು ನಿರ್ಬಂಧಿಸುತ್ತದೆ. ಕರೋನಾಗ್ರಾಫ್ ಸೂರ್ಯನ ಕರೋನವನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಸಾಮಾನ್ಯವಾಗಿ ಈ ರೀತಿ ಸೂರ್ಯನ ವಾತಾವರಣವನ್ನು ನೋಡಲು ಗ್ರಹಣ ಸಮಯದಲ್ಲಿ ಮಾತ್ರ ಸಾಧ್ಯ. ಆದರೆ, ಈ ನೌಕೆಗಳು ಗ್ರಹಣವಿಲ್ಲದೆ ಇದ್ದಾಗಲೂ ತಮ್ಮ ವಿನೂತನ ರಚನೆಯಿಂದಾಗಿ ಸೂರ್ಯನ ಅಧ್ಯಯನ ಮಾಡಲು ನೆರವಾಗಲಿದೆ. ಪ್ರೋಬಾ 3 ಮೂಲಕ ವಿಜ್ಞಾನಿಗಳು ಸೌರ ಕರೋನಾವನ್ನು ಈ ಹಿಂದಿಗಿಂತ ಹೆಚ್ಚು ಹತ್ತಿರದಿಂದ ಅಧ್ಯಯನ ಮಾಡಲಿದ್ದಾರೆ. ಬಾಹ್ಯಾಕಾಶ ಹವಾಮಾನ ಮುನ್ಸೂಚನೆ ಮತ್ತು ಇತರ ಸೌರ ವಿದ್ಯಮಾನಗಳಿಗೆ ಅಮೂಲ್ಯವಾದ ಮಾಹಿತಿ ಇದರಿಂದ ದೊರಕಲಿದೆ.