Astrology
ಈ ದಿನಾಂಕಗಳಲ್ಲಿ ಜನಿಸಿದವರಿಗೆ ಮದುವೆಯ ನಂತರ ಅದೃಷ್ಟ ಬದಲಾಗುತ್ತದೆ, ಇವರು ಸಾಕಷ್ಟು ಯಶಸ್ಸು, ಸಂಪತ್ತು ಗಳಿಸ್ತಾರೆ

Numerology Prediction: ಮದುವೆಯು ಪ್ರತಿಯೊಬ್ಬರು ಜೀವನದಲ್ಲೂ ಮಹತ್ವದ ಪಾತ್ರ ವಹಿಸುತ್ತದೆ, ಮದುವೆ ಎಂದರೆ ಎರಡು ಜೀವಗಳು ಒಂದಾಗುವ ಸುಸಂದರ್ಭ. ಮದುವೆಯ ನಂತರ ಪ್ರೀತಿ, ಒಡನಾಟ ಈ ಎಲ್ಲವೂ ದೊರೆಯುತ್ತದೆ. ಆದರೆ ಕೆಲವರಿಗೆ ಮದುವೆಯ ನಂತರ ಅದೃಷ್ಟವೂ ಜೊತೆಯಾಗುತ್ತದೆ. ಬ್ಯಾಚುಲರ್ ಲೈಫ್‌ನಲ್ಲಿ ಅವರಿಗೆ ಗಳಿಸಲು ಸಾಧ್ಯವಾಗದೇ ಇರುವುದನ್ನೆಲ್ಲಾ ಅವರು ಮದುವೆಯ ನಂತರದಿಂದ ಗಳಿಸಲು ಪ್ರಾರಂಭಿಸುತ್ತಾರೆ. ಅವರು ಅಂದುಕೊಂಡೇ ಇರದ ರೀತಿಯಲ್ಲಿ ಯಶಸ್ಸು ಅವರನ್ನು ಹಿಂಬಾಲಿಸುತ್ತದೆ. ವೃತ್ತಿ, ವ್ಯವಹಾರ ಎಲ್ಲದರಲ್ಲೂ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತದೆ.