Latest Kannada Nation & World
ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ನಡೆಯಲಿರುವ ಸ್ಪರ್ಧಿ ಇವರೇ? ಕೊನೆಗೂ ರಜತ್ ಹೇಳಿದಂತೇ ಆಯ್ತು

Bigg Boss Kannada 11: ಬಿಗ್ ಬಾಸ್ ಕನ್ನಡ 11 ಕೊನೇ ಹಂತಕ್ಕೆ ಆಗಮಿಸಿದೆ. ಇನ್ನೇನು ಮುಂದಿನ ಎರಡೇ ವಾರದಲ್ಲಿ ಬಿಗ್ ಬಾಸ್ ವಿನ್ನರ್ ಪಟ್ಟ ಯಾರಿಗೆ ಎಂಬ ಕೌತುಕಕ್ಕೆ ತೆರೆಬೀಳಲಿದೆ. ದಿನದಿಂದ ದಿನಕ್ಕೆ ಕದನ ಕುತೂಹಲ ಹೆಚ್ಚಾಗುತ್ತಿದ್ದು, ಸ್ಪರ್ಧಿಗಳ ಆಟದ ವೈಖರಿಯೂ ಸಾಕಷ್ಟು ಬದಲಾಗಿದೆ. ಕೆಲವರು ಅಗ್ರೆಸ್ಸಿವ್ ಆಗಿ ಆಟ ಮುಂದುವರಿಸಿದರೆ, ಇನ್ನು ಕೆಲವರು ಫಿನಾಲೆ ಸಮೀಪ ಬಂದಂತೆ ಮಂಕಾಗಿದ್ದಾರೆ. ಇದೆಲ್ಲದರ ನಡುವೆ ಹಳ್ಳಿ ಹೈದ ಹನುಮಂತ ಲಮಾಣಿ ನೇರವಾಗಿ ಫಿನಾಲೆ ಟಿಕೆಟ್ ಪಡೆದು, ಈ ಸೀಸನ್‌ನ ಅಲ್ಟಿಮೇಟ್ ಮತ್ತು ಕೊನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಹಾಗಾದರೆ, ಈ ವಾರ ಎಲಿಮಿನೇಟ್ ಆಗುವ ಸ್ಪರ್ಧಿ ಯಾರು?