Astrology
ಈ 8 ಶಕ್ತಿಶಾಲಿ ಮಂತ್ರ ಪಠಿಸುತ್ತ ಹೊಸ ವರ್ಷ ಶುರುಮಾಡಿಕೊಂಡರೆ ಶುಭಫಲ ಪ್ರಾಪ್ತಿಯಾಗಿ ಒಳಿತಾಗಬಹುದು

New Year 2025 Mantras: ಹೊಸ ವರ್ಷ 2025 ಶುರುವಾಗಿದೆ. ಹೊಸ ವರ್ಷ ಪೂರ್ತಿ ಸಂತೋಷವಾಗಿ, ದುಃಖವಿಲ್ಲದೇ ಖುಷಿಯಾಗಿ, ತೊಂದರೆ ಇಲ್ಲದೇ ಬದುಕು ಸಾಗಿಸಬೇಕು ಎಂಬುದು ಎಲ್ಲರ ಹಾರೈಕೆ, ಆಶಯ ಕೂಡ. ವರ್ಷ ಪೂರ್ತಿ ಯಾವುದೇ ವಿಪತ್ತು ಸಂಭವಿಸದಿರಲಿ ಎಂಬ ಪ್ರಾರ್ಥನೆಯೂ ಇದ್ದೇ ಇದೆ. 2025ರಲ್ಲಿ ಬದುಕಿನಲ್ಲಿ ಎದುರಾಗಬಲ್ಲ ಅಡ್ಡಿ ಆತಂಕ, ಅಡಚಣೆಗಳನ್ನು ನಿವಾರಿಸಲು ದೇವರ ಮೊರೆ ಹೋಗುವುದು ಸಹಜ. ಅನೇಕರು ತಮ್ಮ ತಮ್ಮ ಪ್ರೀತಿಯ ದೇವರ ಶ್ಲೋಕಗಳನ್ನು ಹೇಳುತ್ತ ಹೊಸ ವರ್ಷವನ್ನು ಶುರುಮಾಡುತ್ತಾರೆ. ಇನ್ನು ಹಲವರು ಯಾವ ದೇವರನ್ನು, ಯಾವ ಶ್ಲೋಕದಿಂದ ಅಥವಾ ಮಂತ್ರದೊಂದಿಗೆ ಆರಾಧಿಸಬೇಕು ಎಂದು ಹುಡುಕಾಡುತ್ತಿರುತ್ತಾರೆ. ಅಂಥವರ ಅನುಕೂಲಕ್ಕಾಗಿ ಇಲ್ಲಿವೆ ಕೆಲವು ಸಣ್ಣ ಶ್ಲೋಕ, ಮಂತ್ರಗಳು.