Astrology
ಉತ್ತರ ನಕ್ಷತ್ರದಲ್ಲಿ ಕೇತು ಸಂಚಾರ; ಮೇಷದಿಂದ ಮೀನದವರೆಗೆ ಯಾವ ರಾಶಿಯವರಿಗೆ ಶುಭಫಲ, ಯಾರಿಗೆ ಅಶುಭ, ದ್ವಾದಶ ರಾಶಿಗಳ ಭವಿಷ್ಯ

ಕೇತುವು ನವೆಂಬರ್ 10 ರಿಂದ 2025ರ ಜುಲೈ 20ರವರೆಗೂ ರವಿಯ ನಕ್ಷತ್ರವಾದ ಉತ್ತರ ನಕ್ಷತ್ರದಲ್ಲಿ ಚಲಿಸುತ್ತಾನೆ. ರವಿಯು ಆತ್ಮಕಾರಕನಾಗಿದ್ದು, ಕೇತುವು ವೈರಾಗ್ಯದ ಮನೋಭಾವನೆಯನ್ನು ಉಂಟು ಮಾಡುತ್ತಾನೆ. ಆದ್ದರಿಂದ ಪ್ರತಿಯೊಂದು ರಾಶಿಯ ಜನರಲ್ಲಿಯೂ ಸಾಕಷ್ಟು ಬದಲಾವಣೆ ಉಂಟಾಗುವ ಸಾಧ್ಯತೆಗಳಿವೆ. ಮುಖ್ಯವಾಗಿ ಹಿರಿಯ ವ್ಯಕ್ತಿಗಳು ಮನನೊಂದು ತಪ್ಪನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಬೇರೆಯವರನ್ನು ಕ್ಷಮಿಸುತ್ತಾರೆ.