Latest Kannada Nation & World
ಬಿಜೆಪಿ, ಶಿವಸೇನೆ, ಎನ್‌ಸಿಪಿಗೆ ಸಿಗಲಿವೆ ಎಷ್ಟು ಸಚಿವ ಸ್ಥಾನ

Maharashtra Politics: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಒಂದೇ ದಿನ ಬಾಕಿಯಿದ್ದು, ಆಡಳಿತಾರೂಢ ಮೈತ್ರಿಕೂಟವು ಅಧಿಕಾರ ವಹಿಸಿಕೊಳ್ಳಲಿರುವ ಮುಖ್ಯಮಂತ್ರಿ,. ಉಪಮುಖ್ಯಮಂತ್ರಿ ಯಾರು ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಮೂಲಗಳ ಪ್ರಕಾರ, ಸಚಿವ ಸ್ಥಾನ ಹಂಚಿಕೆಗೆ ಸೂತ್ರವನ್ನು ಅಂತಿಮಗೊಳಿಸಲಾಗಿದೆ. ಅಧಿಕಾರ ಹಂಚಿಕೆಯು 6-1 ಸೂತ್ರವನ್ನು ಆಧರಿಸಿದೆ ಎಂದು ಮೂಲಗಳು ತಿಳಿಸಿವೆ – ಅಂದರೆ ಪಕ್ಷ ಹೊಂದಿರುವ ಪ್ರತಿ ಆರು ಶಾಸಕರಿಗೆ ಒಂದು ಸಚಿವ ಸ್ಥಾನವನ್ನು ನೀಡಲಾಗುತ್ತದೆ. ಸೂತ್ರದ ಪ್ರಕಾರ, ನಿರೀಕ್ಷೆಯಂತೆ, 132 ಸ್ಥಾನಗಳನ್ನು ಗೆದ್ದ ಬಿಜೆಪಿ, ಗರಿಷ್ಠ ಸಂಖ್ಯೆಯ ಸಚಿವ ಸ್ಥಾನಗಳನ್ನು ಸಹ ಹೊಂದಿರುತ್ತದೆ. ಅದರ ಎರಡು ಮಿತ್ರಪಕ್ಷಗಳು ಏಕನಾಥ್ ಶಿಂಧೆ ಶಿವಸೇನೆ ಬಣ ಮತ್ತು ಅಜಿತ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಬಣಕೂಡ ಸಚಿವ ಸ್ಥಾನವನ್ನು ಪಡೆಯಲಿವೆ. ಎರಡೂ ಪಕ್ಷದಿಂದ ತಲಾ ಒಬ್ಬರು ಉಪಮುಖ್ಯಮಂತ್ರಿ ಇರಲಿದ್ದಾರೆ.