Astrology

ಊಟ ಮಾಡುವ ಡೈನಿಂಗ್‌ ಟೇಬಲ್‌ಗೂ ಇದೆ ವಾಸ್ತು; ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಈ ಸಲಹೆ ಪಾಲಿಸಿ

Share This Post ????

ನಮ್ಮ ಹಿರಿಯರು ಊಟ ಹಾಗೂ ಊಟಮಾಡುವ ಸ್ಥಳಕ್ಕೆ ಬಹಳ ಮಹತ್ವ ನೀಡಿದ್ದಾರೆ. ವಾಸ್ತು ಶಾಸ್ತ್ರದಲ್ಲಿ ಇದಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನೂ ಹೇಳಿದ್ದಾರೆ. ಊಟ ಮಾಡುವ ಡೈನಿಂಗ್‌ ಟೇಬಲ್‌ ಇರಿಸಲೂ ವಾಸ್ತು ನಿಯಮಗಳನ್ನು ಹೇಳಿದ್ದಾರೆ. ಅದರಂತೆ ಡೈನಿಂಗ್‌ ಟೇಬಲ್‌ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.

ಊಟ ಮಾಡುವ ಡೈನಿಂಗ್‌ ಟೇಬಲ್‌ಗೂ ಇದೆ ವಾಸ್ತು; ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಈ ಸಲಹೆ ಪಾಲಿಸಿ

ಊಟ ಮಾಡುವ ಡೈನಿಂಗ್‌ ಟೇಬಲ್‌ಗೂ ಇದೆ ವಾಸ್ತು; ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಈ ಸಲಹೆ ಪಾಲಿಸಿ

ಹಿಂದೂ ಧರ್ಮದಲ್ಲಿ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ಸಲಹೆಗಳನ್ನು ನೀಡಲಾಗಿದೆ. ಅವುಗಳಲ್ಲಿ ವಾಸ್ತು ಶಾಸ್ತ್ರವು ಒಂದು. ಜೀವನದಲ್ಲಿ ಸುಖ ಸಂತೋಷ ತುಂಬಿರಬೇಕೆಂದರೆ ವ್ಯಕ್ತಿ ವಾಸಿಸುವ ನೆಲೆ ಸರಿಯಾಗಿರಬೇಕು. ಅಂದರೆ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ನಿಯಮಗಳನ್ನು ಪಾಲಿಸಬೇಕು. ಅದರಿಂದ ಜೀವನದಲ್ಲಿ ಧನಾತ್ಮಕತೆ ನೆಲೆಸುತ್ತದೆ. ಅದೇ ವಾಸ್ತುವನ್ನು ಪಾಲಿಸದಿದ್ದರೆ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದಕ್ಕೆ ನಾವು ಊಟ ಮಾಡುವ ಡೈನಿಂಗ್‌ ಟೇಬಲ್‌ ಕೂಡಾ ಸೇರಿದೆ. ಮನೆಯಲ್ಲಿ ಡೈನಿಂಗ್‌ ಟೇಬಲ್‌ ಇದ್ದು, ಅದನ್ನು ತಪ್ಪು ಜಾಗದಲ್ಲಿ ಇರಿಸಿದ್ದರೆ ಆಗ ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೇ ಡೈನಿಂಗ್‌ ಟೇಬಲ್‌ ಮೇಲೆ ಇಡಲೇಬಾರದಂತಹ ವಸ್ತುಗಳನ್ನು ಇಟ್ಟಿದ್ದರೂ ಕೂಡಾ ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಕುಟುಂಬದ ಸದಸ್ಯರ ಆರೋಗ್ಯ ಹದಗೆಡುತ್ತದೆ. ಆರ್ಥಿಕ ತೊಂದರೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ವೃತ್ತಿ ಜೀವನ ಹಾಗೂ ವೈವಾಹಿಕ ಜೀವನದಲ್ಲೂ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಡೈನಿಂಗ್‌ ಟೇಬಲ್‌ ಅನ್ನು ಯಾವ ದಿಕ್ಕಿನಲ್ಲಿ ಇಡಬೇಕು ಹಾಗೂ ಅದರ ಮೇಲೆ ಯಾವ ವಸ್ತುಗಳನ್ನು ಇಡಬಾರದು ಎಂದು ತಿಳಿಯೋಣ.

ಡೈನಿಂಗ್‌ ಟೇಬಲ್‌ ಅನ್ನು ಹೀಗೆ ಇರಿಸಿ

  • ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಶಾಂತಿಯಿಂದ ಇರಬೇಕೆಂದರೆ ಡೈನಿಂಗ್‌ ಟೇಬಲ್‌ ಅನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಿ.
  • ಡೈನಿಂಗ್‌ ಟೇಬಲ್‌ ಅನ್ನು ಗೋಡೆಯ ಪಕ್ಕಕ್ಕೆ ಇಡಬೇಡಿ. ಅದರ ಸೂತ್ತಲೂ ಸಾಕಷ್ಟು ಜಾಗವಿರಲಿ.
  • ಡೈನಿಂಗ್‌ ಟೇಬಲ್‌ ಯಾವಾಗಲೂ ಸ್ವಚ್ಛವಾಗಿರಬೇಕು. ಅಲ್ಲಿ ಯಾವುದೇ ನಕಾರತ್ಮಕ ಶಕ್ತಿ ಪ್ರವೇಶಿಸಲು ಅನುಕೂಲವಾಗದಂತೆ ಸ್ವಚ್ಛವಾಗಿರಿಸಿ.

ಡೈನಿಂಗ್‌ ಟೇಬಲ್‌ ಮೇಲೆ ಈ ವಸ್ತುಗಳನ್ನು ಇಡಲೇಬೇಡಿ

  • ಮನೆಯ ಡೈನಿಂಗ್‌ ಟೇಬಲ್‌ ಮೇಲೆ ಎಂದಿಗೂ ಔಷಧಿಗಳನ್ನು ಇಡಬಾರದು. ಇದು ಅನಾರೋಗ್ಯದ ಸಂಕೇತ. ಅನಾರೋಗ್ಯ ಪೀಡಿತ ವ್ಯಕ್ತಿಯ ಹೊರತಾಗಿ, ಮನೆಯ ಇತರ ಸದಸ್ಯರ ಮೇಲೂ ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ.
  • ಊಟ ಮಾಡಿದ ನಂತರ ಊಟಕ್ಕೆ ಬಳಸಿದ ವಸ್ತುಗಳಾದ ಪೋರ್ಕ್‌, ಚಮಚ, ಕತ್ತರಿ, ಮತ್ತು ಚಾಕುಗಳಂತಹ ಚೂಪಾದ ವಸ್ತುಗಳನ್ನು ತೆಗೆದುಹಾಕಬೇಕು. ಮತ್ತು ಊಟ ಮಾಡಿದ ಜಾಗವನ್ನು ತಕ್ಷಣ ಒರೆಸಿ, ಸ್ವಚ್ಛವಾಗಿರಿಸಬೇಕು.
  • ಡೈನಿಂಗ್ ಟೇಬಲ್ ಮೇಲೆ ಕೀಲಿಗಳನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ, ಅವುಗಳನ್ನು ವಾರ್ಡ್ರೋಬ್ ಒಳಗೆ ಅಥವಾ ಕೀ ಹೋಲ್ಡರ್‌ನಂತಹ ಸರಿಯಾದ ಸ್ಥಳದಲ್ಲಿ ವ್ಯವಸ್ಥಿತವಾಗಿ ಇರಿಸಿ.
  • ಬಳಕೆ ಮಾಡಿದ ಅಥವಾ ಕೊಳಕು ವಸ್ತುಗಳನ್ನು ಡೈನಿಂಗ್ ಟೇಬಲ್ ಮೇಲೆ ಇಡಬೇಡಿ.
  • ಹೊರಗಿನಿಂದ ತಂದ ವಸ್ತುಗಳನ್ನು ನೇರವಾಗಿ ಡೈನಿಂಗ್‌ ಟೇಬಲ್‌ ಮೇಲೆ ಇಡಬೇಡಿ. ಚೀಲಗಳು, ಪುಸ್ತಕಗಳು ಮುಂತಾದವುಗಳನ್ನು ಇಡುವು ಮೊದಲು ಜಾಗರೂಕರಾಗಿರಿ. ಇದರ ಜೊತೆಗೆ ಒರೆಸುವ ಬಟ್ಟೆ, ಡಸ್ಟರ್‌ಗಳನ್ನು ಸಹ ಇಡಬೇಡಿ. ಈ ರೀತಿಯ ಸಣ್ಣ ಪುಟ್ಟ ವಿಷಯಗಳನ್ನು ಗಮನದಲ್ಲಿರಿಸಿಕೊಂಡರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಉಳಿಯುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!