ದೇಶದ ಅಗ್ರ ಕಂಪನಿಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಪಡೆದ ಟಿಸಿಎಸ್, ಆಕ್ಸೆಂಚರ್ ಮತ್ತು ಇನ್ಫೋಸಿಸ್

ಲಿಂಕ್ಡ್ ಇನ್‌ನ ಕರಿಯರ್ ಎಕ್ಸ್ ಪರ್ಟ್ ಮತ್ತು ಭಾರತದ ಹಿರಿಯ ವ್ಯವಸ್ಥಾಪಕ ಸಂಪಾದಕಿ ನಿರಾಜಿತಾ ಬ್ಯಾನರ್ಜಿ ಅವರು, ಈ ವರ್ಷದ ಪಟ್ಟಿಯಿಂದ ದೊರೆತ ದೊಡ್ಡ ಪಾಠವೆಂದರೆ, ಕಂಪನಿಗಳು ಪ್ರಸ್ತುತ ಅಗತ್ಯಕ್ಕೆ ಬೇಕಾಗಿ ಮಾತ್ರವೇ ನೇಮಕಾತಿ ಮಾಡುತ್ತಿಲ್ಲ, ಬದಲಿಗೆ ನಾಳೆಯ ಕುರಿತು ಯೋಚನೆ ಮಾಡಿಯೇ ನೇಮಕಾತಿ ಮಾಡಿಕೊಳ್ಳುತ್ತಿವೆ. ಭಾರತದ ಉನ್ನತ 25 ಕಂಪನಿಗಳಲ್ಲಿ 19 ಕಂಪನಿಗಳು ತಂತ್ರಜ್ಞಾನ, ಫೈನಾನ್ಸ್ ಮತ್ತು ಎಂಟರ್ ಪ್ರೈಸ್ ಸಾಫ್ಟ್ ವೇರ್ ಕ್ಷೇತ್ರಗಳ ಕಂಪನಿಗಳಾಗಿವೆ. ಈ ಕಂಪನಿಗಳು ತಾಂತ್ರಿಕ ಪರಿಣತಿ ಹೊಂದಿದ, ವಿವಿಧ ತಂಡಗಳಲ್ಲಿ ಕೆಲಸ ಮಾಡಬಲ್ಲ, ಚಿಂತನಾತ್ಮಕವಾಗಿ ಆಲೋಚಿಸುವ, ತ್ವರಿತವಾಗಿ ಹೊಂದಿಕೊಳ್ಳುವ ಮತ್ತು ಕಂಪನಿಯೊಂದಿಗೆ ಬೆಳೆಯಬಲ್ಲ ವೃತ್ತಿಪರರನ್ನು ಹುಡುಕುತ್ತಿವೆ. ಮೊದಲ ಅಥವಾ ಮುಂದಿನ ಉದ್ಯೋಗವನ್ನು ಅರಸುತ್ತಿರುವ ಆಸಕ್ತರಿಗೆ, ಇದು ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿ ಬೆಳೆಸಿಕೊಳ್ಳುವ ಸಮಯವಾಗಿದೆ. ನಿಮ್ಮ ಬೇಸಿಕ್ ಕೌಶಲಗಳನ್ನು ಬಲಪಡಿಸಿಕೊಳ್ಳಿ, ಮುಂದೆ ಉಪಯುಕ್ತವಾಗುವ ಕೌಶಲ್ಯಗಳನ್ನು ಕಲಿಯಿರಿ ಮತ್ತು ಉದ್ಯಮಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ಗಮನಿಸಿ. ಚಂಚಲವಾಗಿರುವ ಉದ್ಯೋಗ ಮಾರುಕಟ್ಟೆಯಲ್ಲಿ, ವೃತ್ತಿ ಸ್ಥಿರತೆಯೇ ನಿಮ್ಮನ್ನು ಬೇರೆಲ್ಲರಿಗಿಂತ ವಿಭಿನ್ನವಾಗಿ ಕಾಣಿಸುವ ಸೂಪರ್ ಪವರ್ ಆಗಿದೆ ಎಂದು ಹೇಳಿದ್ದಾರೆ.