Latest Kannada Nation & World
ಎನ್‌ಟಿಆರ್ ಧ್ವನಿ, ವಿಜಯ್ ದೇವರಕೊಂಡ ಆಕ್ಷನ್, ಅನಿರುದ್ಧ್ ಬಿಜಿಎಂ; ನಿರೀಕ್ಷೆ ಹೆಚ್ಚಿಸಿದ ‘ಕಿಂಗ್‌ಡಮ್’ ಚಿತ್ರದ ಟೀಸರ್

ಕಿಂಗ್‌ಡಮ್ ಸಿನಿಮಾ ಬಗ್ಗೆ..
ಗೌತಮ್ ತಿನ್ನನುರಿ ಕಿಂಗ್‌ಡಮ್ ಚಿತ್ರವನ್ನು ನಿರ್ದೇಶಿಸುತ್ತಿದ್ದು, ವಿಜಯ್ ದೇವರಕೊಂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಜೆರ್ಸಿ ಚಿತ್ರದ ಮೂಲಕ ಮ್ಯಾಜಿಕ್ ಮಾಡಿದ್ದರು ಗೌತಮ್, ಈಗ ಕಿಂಗ್‌ಡಮ್ ಚಿತ್ರವನ್ನು ಸಂಪೂರ್ಣವಾಗಿ ವಿಭಿನ್ನ ಸ್ಪೈ ಆಕ್ಷನ್ ಥ್ರಿಲ್ಲರ್ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇದೀಗ ಟೀಸರ್ ಮೂಲಕ ಸಿನಿಮಾ ಶೀರ್ಷಿಕೆಯ ಜತೆಗೆ ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಿ, ವಿಜಯ್ ಅಭಿಮಾನಿಗಳಿಗೆ ಡಬಲ್ ಧಮಾಕಾ ನೀಡಿದ್ದಾರೆ ನಿರ್ದೇಶಕರು. ಅಂದಹಾಗೆ ಈ ಚಿತ್ರವನ್ನು ನಾಗವಂಶಿ ಮತ್ತು ಸಾಯಿ ಸೌಜನ್ಯ ನಿರ್ಮಿಸುತ್ತಿದ್ದಾರೆ.