Latest Kannada Nation & World
ಎರಡು ವರ್ಷಗಳ ಬಳಿಕ ಒಟಿಟಿಗೆ ಬಂದ ಕರುನಾಡ ಸ್ಫೂರ್ತಿ ಕಥೆ, ವಿಜಯ್ ಸಂಕೇಶ್ವರ್ ಬಯೋಪಿಕ್ ‘ವಿಜಯಾನಂದ್’

ನಿಹಾಲ್ ರಜಪೂತ್, ಭರತ್ ಬೋಪಣ್ಣ, ಅನಂತ್ ನಾಗ್, ರವಿಚಂದ್ರನ್, ಪ್ರಕಾಶ್ ಬೆಳವಾಡಿ, ಅನೀಶ್ ಕುರುವಿಲ್ಲಾ, ವಿನಯ ಪ್ರಸಾದ್ ಮತ್ತು ಸಿರಿ ಪ್ರಹ್ಲಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ವಿಜಯಾನಂದ್ ಸಿನಿಮಾ, 2022ರ ಡಿಸೆಂಬರ್‌ನಲ್ಲಿ ಬಿಡುಗಡೆ ಆದರೂ, ಒಟಿಟಿ ಅಂಗಳಕ್ಕೆ ಬಂದಿರಲಿಲ್ಲ. ವಿಜಯ್ ಸಂಕೇಶ್ವರ್ ಅವರ ಜೀವನವನ್ನು ಚಿತ್ರಮಂದಿರಗಳಲ್ಲಿ ವೀಕ್ಷಣೆ ಮಾಡದೇ ಇದ್ದವರು, ಒಟಿಟಿಗೆ ಅದ್ಯಾವಾಗ ಬರಲಿದೆ ಎಂದು ಕಾದಿದ್ದೇ ಬಂತು. ಆದರೆ, ಒಟಿಟಿಯಷ್ಟೇ ಅಲ್ಲ, ಕಿರುತೆರೆಯಲ್ಲಿಯೂ ಈ ಸಿನಿಮಾ ಪ್ರಸಾರ ಕಂಡಿರಲಿಲ್ಲ. ಇದೀಗ ಸುದೀರ್ಘ 2 ವರ್ಷಗಳ ಬಳಿಕ ಒಟಿಟಿಗೆ ಪ್ರವೇಶಿಸಿ, ಸ್ಟ್ರೀಮಿಂಗ್ ಆರಂಭಿಸಿದೆ.