ನಾಲಿಗೆ ಹರಿಬಿಟ್ಟ ಕಾಂತಮ್ಮಗೆ ಶ್ರಾವಣಿ ಕ್ಲಾಸ್, ಶರತ್ ದೆಸೆಯಿಂದ ಸುಬ್ಬುವನ್ನು ಒಳ ಕರೆದ ವೀರು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಕೊನೆಗೂ ಸುಬ್ಬವನ್ನು ಒಳ ಕರೆದ ವೀರೇಂದ್ರ
ಗೇಟ್ ಬಳಿಯೇ ಬಿಸಿಲಲ್ಲಿ ನಿಂತಿರುವ ಸುಬ್ಬು ಬಳಿ ಸೆಕ್ಯೂರಿಟಿ ರಮೇಶ್ ಸುಬ್ಬು ಸರ್, ಇನ್ನೂ ಎಷ್ಟು ದಿನ ಹೀಗೆ ಬಿಸಿಲಲ್ಲಿ ನಿಂತಿರ್ತೀರಾ, ಯಜಮಾನ್ರಿಗೆ ನಿಮ್ಮ ಮೇಲೆ ತುಂಬಾ ಕೋಪ ಇದೆ ಎಂದು ಹೇಳುತ್ತಾನೆ. ಆದಕ್ಕೆ ನಂಗೆ ಯಜಮಾನರ ನಂಬಿಕೆ, ವಿಶ್ವಾಸದಷ್ಟೇ ಅವರ ಪ್ರೀತಿಯ ಬಗ್ಗೆಯೂ ಗೊತ್ತು, ಇವತ್ತಲ್ಲ ನಾಳೆ ಅವರು ನನ್ನನ್ನು ಕರೆದೇ ಕರೆಯುತ್ತಾರೆ ಎಂದು ಹೇಳುತ್ತಿರುತ್ತಾನೆ. ಅಷ್ಟೊತ್ತಿಗೆ ಒಂದು ಕಾರು ಒಂದು ನಿಲ್ಲುತ್ತದೆ. ಕಾರ್ನಿಂದ ನಾ ನಿನ್ನ ಬಿಡಲಾರೆ ಧಾರಾವಾಹಿ ನಾಯಕ ಶರತ್ ಇಳಿಯುತ್ತಾನೆ. ಸುಬ್ಬುವನ್ನು ನೋಡಿ ಮಾತನಾಡಿಸಲು ಬರುತ್ತಾನೆ. ಮಾತನಾಡಿ ಮೇಲೆ ಅವನನ್ನು ಒಳ ಕರೆದರೂ ಅವನು ಬರುವುದಿಲ್ಲ. ಯಜಮಾನರೇ ಬಂದು ಕರೆಯಬೇಕು ಎಂದು ಹೇಳುತ್ತಾನೆ. ಸರಿ ನಾನು ಅವರೇ ಕರೆಯುವಂತೆ ಮಾಡುತ್ತೇನೆ ಎಂದು ಹೇಳಿ ಒಳ ಹೋಗುತ್ತಾನೆ ಶರತ್. ಮಿನಿಸ್ಟರ್ ವೀರೇಂದ್ರ ಬಳಿ ತನ್ನ ಪ್ರಾಜೆಕ್ಟ್ ಬಗ್ಗೆ ಮಾತನಾಡುವ ಶರತ್ ಅವರಿಗೆ ಪ್ರಾಜೆಕ್ಟ್ ಬಗ್ಗೆ ವಿವರಣೆ ನೀಡಿ, ಭೇಷ್ ಎನ್ನಿಸಿಕೊಳ್ಳುತ್ತಾನೆ. ಅಲ್ಲದೇ ತನ್ನ ಈ ಪ್ರಾಜೆಕ್ಟ್ಗೆ ಸುಬ್ಬು ಸಹಾಯ ಬೇಕು, ದಯವಿಟ್ಟು ನೀವು ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಳ್ಳುತ್ತಾನೆ. ಆರಂಭದಲ್ಲಿ ಒಪ್ಪದೇ ಹೋದರೂ ಕೊನೆಯಲ್ಲಿ ಒಪ್ಪಿಗೆ ನೀಡಿ, ಸುಬ್ಬವನ್ನು ಗೇಟ್ ಒಳಗೆ ಬರುವಂತೆ ಹೇಳುತ್ತಾನೆ ವೀರೇಂದ್ರ.