Latest Kannada Nation & World
ವಿರಾಟ್ ಕೊಹ್ಲಿಗೆ ಗ್ರ್ಯಾಂಡ್ ವೆಲ್ಕಮ್ ನೀಡಿದ ಆಸ್ಟ್ರೇಲಿಯಾದ ಪತ್ರಿಕೆಗಳು; ಕ್ಯಾಪ್ಟನ್ಸಿ ಬಿಟ್ರೂ, ಫ್ಲಾಪ್ ಆಗಿದ್ದರೂ ಏನ್ ಕ್ರೇಜ್ ಗುರು!

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕೊಹ್ಲಿ, ತೀವ್ರ ಟೀಕೆಗೆ ಗುರಿಯಾದರು. ಇದರೊಂದಿಗೆ ಭಾರತ ತವರಿನಲ್ಲಿ 0-3 ಅಂತರದಿಂದ ವೈಟ್ವಾಶ್ ಮುಖಭಂಗಕ್ಕೆ ಒಳಗಾದರು. ಕೊಹ್ಲಿ, 15.50 ಸರಾಸರಿಯಲ್ಲಿ 93 ರನ್ ಗಳಿಸಿದ್ದರು. ಇದು ಕಳೆದ 7 ವರ್ಷಗಳಲ್ಲಿ ತವರು ಸರಣಿಯಲ್ಲಿ ಕನಿಷ್ಠ ಸರಾಸರಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿದರೆ ಕೊಹ್ಲಿಯ ವೃತ್ತಿಜೀವನಕ್ಕೆ ತಿರುವು ಸಿಗಲಿದೆ. ಆಸೀಸ್ ವಿರುದ್ಧ ಬ್ಯಾಟಿಂಗ್ ಮಾಡಲು ಇಷ್ಟಪಡುವ ಕೊಹ್ಲಿ, 25 ಟೆಸ್ಟ್ ಪಂದ್ಯಗಳಿಂದ 2000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆ ಮೂಲಕ ಉತ್ತಮ ದಾಖಲೆ ಹೊಂದಿದ್ದಾರೆ. ಇದೀಗ ಆಸ್ಟ್ರೇಲಿಯಾ ನ್ಯೂಸ್ ಪೇಪರ್ಗಳಲ್ಲಿ ಕೊಹ್ಲಿ ಫೋಟೋ ಮುಖಪುಟದಲ್ಲಿ ಹಾಕಿ ಗ್ರ್ಯಾಂಡ್ ವೆಲ್ಕಮ್ ಮಾಡಿಕೊಂಡಿದ್ದಕ್ಕೆ ಅವರ ಅಭಿಮಾನಿಗಳು ಪ್ರತಿಕ್ರಿಯಿಸಿ, ಕ್ಯಾಪ್ಟನ್ಸಿ ಬಿಟ್ರೂ, ಫ್ಲಾಪ್ ಆಗಿದ್ದರೂ ಏನ್ ಕ್ರೇಜ್ ಗುರು ಅಂತಿದ್ದಾರೆ.