Latest Kannada Nation & World
ಏರುತ್ತೆ ಅಂತ ಇನ್ವೆಸ್ಟ್ ಮಾಡಿದ್ರೆ ಈ ಷೇರು 700 ರೂ ನಿಂದ ಜರ್ರಂತ 2 ರೂ ಗೆ ಇಳಿಯೋದಾ!; ಹೂಡಿಕೆದಾರರಿಗೆ ದೊಡ್ಡ ಲಾಸ್

ಷೇರುಪೇಟೆ ಹೂಡಿಕೆಯೇ ಹಾಗೆ. ಒಂದು ರೀತಿ ಜೂಜಾಟದಂತೆ. ಸ್ವಲ್ಪ ಯಾಮಾರಿದರೂ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡುವಂಥ ವಹಿವಾಟು. ಲಾಭ ಮಾಡಿಕೊಟ್ಟರೂ ಅಷ್ಟೇ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಡುವಂತಹ ವಹಿವಾಟು. ಯಾವುದೇ ಕಂಪನಿಯ ಷೇರುಗಳ ಮೇಲೆ ಹೂಡಿಕೆ ಮಾಡುವಾಗ ಅದರ ವಹಿವಾಟುಗಳ ಕಡೆಗೆ, ಪಾಲುದಾರರು ಯಾರು, ಬಂಡವಾಳದಲ್ಲಿ ಯಾರ ಪಾಲು ಎಷ್ಟು, ಕಳೆದ ಮೂರು ವರ್ಷ ಕಂಪನಿ ವಹಿವಾಟು ಹೇಗಿದೆ, ಲಾಭ ಎಷ್ಟು, ವಹಿವಾಟು ಎಷ್ಟು ಎಂಬಿತ್ಯಾದಿ ಗಮನಿಸಬೇಕು. ಆದರೆ, ಕಂಪನಿಯ ಬ್ರಾಂಡ್ ನೋಡಿಕೊಂಡು ಅನೇಕರು ಹೂಡಿಕೆ ಮಾಡಿ ಕೈ ಸುಟ್ಟುಕೊಳ್ಳುತ್ತಾರೆ.