Latest Kannada Nation & World
ತೆಲುಗು ಮಹಿಳೆಯರ ಬಗ್ಗೆ ಬಾಯಿ ಹರಿಬಿಟ್ಟಿದ್ದ ಜಾಣ ಸಿನಿಮಾ ಖ್ಯಾತಿಯ ತಮಿಳು ನಟಿ ಕಸ್ತೂರಿ ಶಂಕರ್ ಬಂಧನ

ಕಿಚ್ಚು ಹಚ್ಚಿದ್ದ ನಟಿಯವ ಹೇಳಿಕೆ
ಬ್ರಾಹ್ಮಣರ ರಕ್ಷಣೆಗಾಗಿ ವಿಶೇಷ ಕಾನೂನಿಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಸ್ತೂರಿ, ಮಾತಿನ ಭರದಲ್ಲಿ, “300 ವರ್ಷಗಳ ಹಿಂದೆ ತಮಿಳು ರಾಜರ ಸೇವೆ ಮಾಡಲು ತೆಲುಗು ಮಹಿಳೆಯರು ತಮಿಳುನಾಡಿಗೆ ಬಂದು, ತಮಿಳಿಗರಾದರು. ಅದಾದ ಬಳಿಕ ತಮಿಳಿಗರು ಎಂದು ತಮ್ಮ ಐಡೆಂಟಿಟಿಯನ್ನು ಬಲಪಡಿಸಿಕೊಂಡರು” ಎಂದು ಕಸ್ತೂರಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ತೆಲುಗು ಮಂದಿಯ ಅಸ್ಮಿತೆಗೆ ಕಿಚ್ಚು ಹಚ್ಚಿತು. ವ್ಯಾಪಕ ಟೀಕೆಗಳು ಕೇಳಿಬಂದವು. ಹೀಗೆ ನಟಿಯ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ, ಇದೇ ಘಟನೆಗೆ ರಾಜಕೀಯ ಅಂಟಿಕೊಂಡಿತು. “ಇಲ್ಲ ನಾನು ಹಾಗೇ ಹೇಳಿಲ್ಲ. ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ” ಎಂದೂ ಸಮಜಾಯಿಷಿ ಕೊಟ್ಟಿದ್ದರು ಕಸ್ತೂರಿ.