Latest Kannada Nation & World
ಐಪಿಎಲ್ ಇತಿಹಾಸದಲ್ಲೇ ನಿಧಾನಗತಿಯ ಬೌಲ್ ಮಾಡಿದರಾ ಸತ್ಯನಾರಾಯಣ ರಾಜು; ಬ್ರಾವೋ ನೆನಪಿಸಿದ ಮುಂಬೈ ಬೌಲರ್

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ (ಮಾ.29) ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾದವು. ಪಂದ್ಯದಲ್ಲಿ ಎಂಐ ಪರ ಸತ್ಯನಾರಾಯಣ ರಾಜು ಆಡಿದರು. ತಮ್ಮ ಎರಡನೇ ಐಪಿಎಲ್ ಪಂದ್ಯದಲ್ಲಿ ಅವರು ಹೊಸ ಹಾಗೂ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ಆದರೆ, ಇದು ಖುದ್ದು ರಾಜು ಅವರಿಗೂ ಅನಿರೀಕ್ಷಿತ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಿಧಾನಗತಿಯ ಎಸೆತವೊಂದನ್ನು ಬೌಲ್ ಮಾಡಿದ್ದಾರೆ.