Latest Kannada Nation & World
ಐಪಿಎಲ್ ಸಮಯದಲ್ಲೇ ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧತೆ; ಭಾರತೀಯ ಆಟಗಾರರಿಗೆ ವಿಶೇಷ ಶಿಬಿರ ಯೋಜಿಸಿದ ಬಿಸಿಸಿಐ

ಸಾಮಾನ್ಯವಾಗಿ, ಐಪಿಎಲ್ ಸಮಯದಲ್ಲಿ ಭಾರತೀಯ ಆಟಗಾರರಿಗೆ ತಮ್ಮ ತಮ್ಮ ಫ್ರಾಂಚೈಸಿಗಳತ್ತ ಗಮನ ಹರಿಸಲು ಅವಕಾಶವಿದೆ. ಆದರೆ ತವರು ಮತ್ತು ವಿದೇಶದಲ್ಲಿ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಇತ್ತೀಚಿನ ಪ್ರದರ್ಶನದ ನಂತರ, ಈ ಹೊಸ ಪ್ರವೃತ್ತಿ ಆರಂಭವಾಗುವ ನಿರೀಕ್ಷೆ ಇದೆ. ಕಳೆದ ವರ್ಷ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 0-3 ಅಂತರದಲ್ಲಿ ಸೋತಿದ್ದ ಭಾರತ, ಆ ನಂತರ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 1-3 ಅಂತರದಲ್ಲಿ ಸೋಲು ಅನುಭವಿಸಿತ್ತು.