Latest Kannada Nation & World
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ತಾತ್ಕಾಲಿಕ ವೇಳಾಪಟ್ಟಿ ಪ್ರಕಟ; ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ, ಎಲ್ಲಿ, ಎಷ್ಟೊತ್ತಿಗೆ?
ಬಹುನಿರೀಕ್ಷಿತ ಟೂರ್ನಿಯು ಫೆಬ್ರವರಿ 19ರಿಂದ ಪ್ರಾರಂಭವಾಗುವ ಸಾಧ್ಯತೆ ಇದ್ದು, ಆರಂಭಿಕ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಟ ನಡೆಸಬಹುದು ಎಂದು ವರದಿಯಾಗಿದೆ. ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, ಫೆಬ್ರವರಿ 19ರಿಂದ ಮಾರ್ಚ್ 9ರ ತನಕ ಎರಡು ಸೆಮಿಫೈನಲ್, ಫೈನಲ್ ಸೇರಿ ಒಟ್ಟು 14 ಪಂದ್ಯಗಳು ನಡೆಯಲಿವೆ. ಆದರೆ ಫೈನಲ್ಗೆ ಮೀಸಲು ದಿನವನ್ನೂ ಇಡಲಾಗಿದೆ. ಮಾರ್ಚ್ 10 ಮೀಸಲು ದಿನವಾಗಿದೆ. ಒಂದು ವೇಳೆ ಮಳೆಯಿಂದ ಅಥವಾ ತುರ್ತು ಕಾರಣದಿಂದ ಪಂದ್ಯ ರದ್ದಾದರೆ ಈ ದಿನದಂದು ಫೈನಲ್ ನಡೆಯಲಿದೆ ಎನ್ನಲಾಗಿದೆ.