Latest Kannada Nation & World
ಒಂದು ಕರುಳ ಸತ್ಯ, ಇನ್ನೊಂದು ಕರಾಳ ಸತ್ಯ! ಸಿಹಿಯದ್ದು ಕೊಲೆ ಎಂದ ಅಶೋಕ, ಆಪ್ತಮಿತ್ರನ ಮಾತು ನಂಬ್ತಾನಾ ಶ್ರೀರಾಮ?
ಇನ್ನೂ ಆಗದ ಸಿಹಿ ಕಾರ್ಯ
ಸಿಹಿಯ ಕಾರ್ಯ ಇನ್ನೂ ಮಾಡೇ ಇಲ್ಲ ಅನ್ನೋ ಕಾರಣಕ್ಕೆ, ತಾತ ಸೂರ್ಯಪ್ರಕಾಶ್ ಎಲ್ಲರನ್ನ ಕರೆದು ಮಾತಿಗಿಳಿದಿದ್ದಾನೆ. ಹೇಗಾದ್ರೂ ಮಾಡಿ ಸೀತಾಳನ್ನು ಒಪ್ಪಿಸು ಎಂದಿದ್ದಾನೆ. ಇನ್ನೊಂದು ಕಡೆ, ಈ ಕಾರ್ಯ ಮಾಡದಿದ್ದರೆ, ನಮ್ಮ ಸಿಹಿಗೆ ಸದ್ಗತಿ ಹೇಗೆ ಸಿಗುತ್ತೆ ಹೇಳೂ ಎಂದಿದ್ದಾಳೆ ಭಾರ್ಗವಿ. ಸಿಹಿಗೋಸ್ಕರ ಒಂದು ಪೂಜೆ ಇಟ್ಟುಕೊಳ್ಳೋಣ ಎಂದು ತಾತ ಹೇಳ್ತಿದ್ದಾರೆ ಎಂದು ಏನೋ ಒಂದು ಹೇಳಿ, ಮಾತು ಮರೆಸಿದ್ದಾನೆ ರಾಮ.