Latest Kannada Nation & World
ಆಸ್ಟ್ರೇಲಿಯಾ ಮಾಧ್ಯಮದ ಅತಿರೇಕ; ‘ವಿರಾಟ್ ಐ ಆಮ್ ಯುವರ್ ಫಾದರ್’ ಹೆಡ್‌ಲೈನ್‌ಗೆ ನೆಟ್ಟಿಗರ ಕಟು ಟೀಕೆ

ನೆಟ್ಟಿಗರ ಆಕ್ರೋಶ
“ನೀವು (ಮಾಧ್ಯಮ) ತೀರಾ ಕೆಳಮಟ್ಟಕ್ಕೆ ಇಳಿಯುತ್ತಿದ್ದೀರಿ. ಕೊಹ್ಲಿಗೆ ಅಗೌರವ ತೋರುವುದು ಮಾತ್ರವಲ್ಲ, ಇಂಥ ಬಾಲಿಶ ನಡೆಯಿಂದ 19 ವರ್ಷದ ಯುವ ಆಟಗಾರನ ಬಗ್ಗೆ ದ್ವೇಷ ಹುಟ್ಟಿಸುತ್ತಿದ್ದೀರಿ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, “ಎಲ್ಲವೂ ಚೆನ್ನಾಗಿತ್ತು, ಆದರೆ ಇದು ಅತಿಯಾಯ್ತು. ನಿಮಗೆ ಸ್ವಲ್ಪವಾದರೂ ನಾಚಿಕೆಯಾಗಬೇಕು,” ಎಂದು ಬರೆದಿದ್ದಾರೆ. “ಪತ್ರಿಕೆ ನಿಜಕ್ಕೂ ಇದನ್ನು ಮುದ್ರಿಸುತ್ತಿದೆಯೇ? ತಮಾಷೆ ಮತ್ತು ಸ್ಲೆಡ್ಜಿಂಗ್‌ಗೂ ಒಂದು ಮಿತಿ ಇದೆ. ನಾಚಿಕೆಯಾಗಬೇಕು!,” ಎಂದಿದ್ದಾರೆ.