Astrology
ಕನಸಲ್ಲಿ ಕಂಡ ಕೃಷ್ಣನ ಗುಡಿಯಲ್ಲಿ ನೋಡಲು ಗ್ರಾಮಸ್ಥರ ಕಾತರ, 9 ದಿನ ವಿವಿಧ ಕಾರ್ಯಕ್ರಮ

ಏಪ್ರಿಲ್ 30, ಬುಧವಾರ: ಬೆಳಗ್ಗೆ 8 ಗಂಟೆಯಿಂದ ಗೋಪಾಲಕೃಷ್ಣ ದೇವರ ಬಿಂಬಪ್ರಾಣ ಪ್ರತಿಷ್ಠೆ, ಗಣಪತಿ ಮತ್ತು ದುರ್ಗೆ ನೂತನ ಬಿಂಬ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಪ್ರತಿಷ್ಠಾ ಬಲಿ, ಮಧ್ಯಾಹ್ನ ಪೂಜೆ, ನಿತ್ಯ ನಿಮಿತ್ತಿಕೆಗಳ ನಿಶ್ಚಯ, ಮತ್ತು ಅನುಷ್ಠಾನ ಸಂಕಲ್ಪ ಪ್ರಾರ್ಥನೆ. ಮಧ್ಯಾಹ್ನ ವಿಷ್ಣಸಹಸ್ರನಾಮ ಮತ್ತು ನಾರಾಯಣೀಯಂ ಪಾರಾಯಣ, ಸಂಜೆ 4:30ರಿಂದ ಡಾ| ವಿದ್ಯಾಭೂಷಣ ಇವರಿಂದ ಭಕ್ತಿಗಾನಸುಧೆ. ಸಂಜೆ 6ರಿಂದ ಧಾರ್ಮಿಕ ಸಭಾಕಾರ್ಯಕ್ರಮ, ರಾತ್ರಿ 8 ಗಂಟೆಯಿಂದ ಸಾಯಿಶಕ್ತಿ ಕಲಾಬಳಗ ಮಂಗಳೂರು ಇವರಿಂದ ‘ಜೋಡುಜೀಟಿಗೆ‘ ನಾಟಕ ಪ್ರದರ್ಶನ ಇರಲಿದೆ.