Latest Kannada Nation & World
ಕೊಡಗಿನಲ್ಲಿ ಹಾಕಿಗಿದೆ 140 ವರ್ಷಗಳ ಇತಿಹಾಸ; ಕೊಡವ ಹಾಕಿ ಉತ್ಸವ ಇತಿಹಾಸ, ಹಿನ್ನೆಲೆಯ ವಿವರ ಹೀಗಿದೆ

ಕೊಡಗಿನ ಹಾಕಿ ಉತ್ಸವದ ಇತಿಹಾಸ
ಮಾಳೆಯಂಡ ಮುತ್ತಪ್ಪ, ಗೋವಿಂದ, ಪೈಕೇರ ಕಾಳಯ್ಯ ಅಂಜಪರವಂಡ ಸುಬ್ಬಯ್ಯ, ಅರ್ಜುನ್ ಹಾಲಪ್ಪ, ಮನೆಯಪಂಡ ಸೋಮಯ್ಯಮೊಳ್ಳೆರ ಗಣೇಶ್, ರಘುನಾಥ್, ಸುನಿಲ್, ಚೆಪ್ಪುಡಿರ ಪೂಣಚ್ಚ… ಹೀಗೆ ಕೊಡಗಿನ ಪ್ರತಿಭೆಗಳು ಹಲವು. ವಿಶ್ವ ಮಟ್ಟದಲ್ಲಿ ಭಾರತ ಹಾಕಿ ತಂಡ ಖ್ಯಾತಿ ಪಡೆಯಲು ದಿಗ್ಗಜ ಆಟಗಾರರೇ ಕಾರಣ ಎಂದು ಹೇಳಿದರೆ ತಪ್ಪಾಗಲ್ಲ. ಕೊಡಗು ಜಿಲ್ಲೆಯು ಭಾರತೀಯ ಹಾಕಿ ಆಟದ ತವರು ಎನ್ನುವದು ಜನಜನಿತವಾದದು. ಕೊಡಗಿನಲ್ಲಿ 1997ರಿಂದ ಹಾಕಿ ಉತ್ಸವ ಆರಂಭವಾಯಿತು.