Latest Kannada Nation & World
ಕಪ್ಪು ಪಟ್ಟಿ ಧರಿಸಿ 605 ವಿಕೆಟ್ ಪಡೆದ ಖ್ಯಾತ ಆಟಗಾರನಿಗೆ ಗೌರವ ನಮನ ಸಲ್ಲಿಸಿದ ಭಾರತ ತಂಡ; ಆ ಕ್ರಿಕೆಟಿಗನ ಸಾಧನೆ ಏನು?

ಲಿಸ್ಟ್ ಎ ಕ್ರಿಕೆಟ್ನಲ್ಲೂ 16 ವಿಕೆಟ್ ಪಡೆದಿರುವ ಶಿವಲ್ಕರ್, 13 ಬಾರಿ 10 ವಿಕೆಟ್, 42 ಬಾರಿ 5 ವಿಕೆಟ್ ಗೊಂಚಲು ವಿಕೆಟ್ ಪಡೆದಿದ್ದಾರೆ. ತನ್ನ ವೃತ್ತಿಜೀವನದಲ್ಲಿ ಫಸ್ಟ್ ಕ್ರಿಕೆಟ್ನಲ್ಲಿ 34125 ಎಸೆತಗಳನ್ನು ಹಾಕಿರುವ ಅವರು 11603 ರನ್ ಬಿಟ್ಟುಕೊಟ್ಟಿದ್ದಾರೆ. 1972-73ರ ರಣಜಿ ಆವೃತ್ತಿಯಲ್ಲಿ ಮುಂಬೈ ಮತ್ತೊಂದು ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪದ್ಮಕರ್ ಶಿವಲ್ಕರ್, ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 8/16 ಮತ್ತು 5/18 ವಿಕೆಟ್ ಪಡೆದಿದ್ದರು. ಒಟ್ಟು 600ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದರೂ, ಅವರಿಗೆ ಭಾರತೀಯ ತಂಡದಲ್ಲಿ ಅವಕಾಶ ಸಿಗದಿರುವುದು ಬೇಸರದ ಸಂಗತಿ.