Latest Kannada Nation & World
194 ರೂ ಐಸ್‌ಕ್ರಿಮ್‌ಗೆ 35 ರೂ ಟ್ಯಾಕ್ಸ್, 30 ಲಕ್ಷ ವೇತನಕ್ಕೆ 6 ಲಕ್ಷ ತೆರಿಗೆ, ಬಜೆಟ್ ಸಮಯದಲ್ಲಿ ತೆರಿಗೆದಾರರ ಗೋಳು

ಇನ್‌ಕಂ ಟ್ಯಾಕ್ಸ್ ಟ್ರೆಂಡಿಂಗ್
ಎಕ್ಸ್‌ನಲ್ಲಿ ನೀರಜ್ ಎಂಬವರು ಈ ರೀತಿ ಪೋಸ್ಟ್ ಮಾಡಿದ್ದಾರೆ. “ನನ್ನ ಒಟ್ಟು ಆದಾಯ 30 ಲಕ್ಷ ರೂಪಾಯಿ. ಇದಕ್ಕೆ 6,24,000 ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದೇನೆ. ಉಳಿದ ನನ್ನ ನಿವ್ವಳ ಆದಾಯ 23,76,000 ರೂಪಾಯಿ. ಈಗ ಕಾರು ಒಂದು ಖರೀದಿಸಿದೆ ಎಂದಿರಲಿ. 23.76 ಲಕ್ಷ ರೂಪಾಯಿಯ ಕಾರು ಖರೀದಿಸಿದರೆ ಜಿಎಸ್‌ಟಿ ಮತ್ತು ಸೆಸ್ 11,40,480 ರೂಪಾಯಿ ಪಾವತಿಸಬೇಕು. ನಾನು ಒಟ್ಟು ಪಾವತಿಸಿದ ತೆರಿಗೆ 17,64,480 ರೂಪಾಯಿ. ನನ್ನ ಒಟ್ಟು ವೇತನದಲ್ಲಿ ನಾನು ಸರಕಾರಕ್ಕೆ ನೀಡಿದ್ದು 17,64,480 ರೂಪಾಯಿ. ನನ್ನ ವೇತನದಲ್ಲಿ ನನಗೆ ಉಳಿದಿರುವುದು 12,35,520 ರೂಪಾಯಿ” ಎಂದು ಅವರು ಪೋಸ್ಟ್ ಮಾಡಿದ್ದಾರೆ.