Latest Kannada Nation & World

ಕರುಣ್ ಅಬ್ಬರಕ್ಕೂ ತೋರದ ಗೆಲುವಿನ ಕರುಣೆ, ಹ್ಯಾಟ್ರಿಕ್ ರನೌಟ್ ಮಾಡಿದ ಮುಂಬೈಗೆ ರೋಚಕ ಗೆಲುವು; ಡೆಲ್ಲಿಗೆ ಮೊದಲ ಸೋಲು

Share This Post ????

DC vs MI, IPL 2025: 18ನೇ ಆವೃತ್ತಿಯ ಐಪಿಎಲ್​ನ 30ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 12 ರನ್​ಗಳ ರೋಚಕ ಗೆಲುವು ಸಾಧಿಸಿದೆ.

ಕರುಣ್ ಅಬ್ಬರಕ್ಕೂ ತೋರದ ಗೆಲುವಿನ ಕರುಣೆ, ಹ್ಯಾಟ್ರಿಕ್ ರನೌಟ್ ಮಾಡಿದ ಮುಂಬೈಗೆ ರೋಚಕ ಗೆಲುವು; ಡೆಲ್ಲಿಗೆ ಮೊದಲ ಸೋಲು

ಕರುಣ್ ಅಬ್ಬರಕ್ಕೂ ತೋರದ ಗೆಲುವಿನ ಕರುಣೆ, ಹ್ಯಾಟ್ರಿಕ್ ರನೌಟ್ ಮಾಡಿದ ಮುಂಬೈಗೆ ರೋಚಕ ಗೆಲುವು; ಡೆಲ್ಲಿಗೆ ಮೊದಲ ಸೋಲು (PTI)

2022ರ ನಂತರ ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯವನ್ನಾಡಿದ ಕನ್ನಡಿಗ ಕರುಣ್ ನಾಯರ್ ತನಗೆ ಅವಕಾಶ ಸಿಕ್ಕ ಮೊದಲ ಪಂದ್ಯದಲ್ಲೇ ಅಬ್ಬರಿಸಿ ಬೊಬ್ಬಿರಿದರು. ಆದರೆ ಅವರ ಆರ್ಭಟದ ಹೊರತಾಗಿಯೂ ಪ್ರಸಕ್ತ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಮೊದಲ ಸೋಲಿನ ರುಚಿ ಕಂಡಿದೆ. ದೇಶೀಯ ಕ್ರಿಕೆಟ್​​ನ ಕಳೆದ ಸೀಸನ್​​ ಎಲ್ಲಾ ಸ್ವರೂಪದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕರುಣ್​ರ ಭರ್ಜರಿ ಅರ್ಧಶತಕದ (89) ಸಹಾಯದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ಸನಿಹಕ್ಕೆ ಬಂದ ಡೆಲ್ಲಿ,12 ರನ್​ಗಳಿಂದ ಪರಾಭವಗೊಂಡಿದೆ. 19ನೇ ಓವರ್​ನಲ್ಲಿ ನಡೆದ ಹೈಡ್ರಾಮಾದಲ್ಲಿ ಹ್ಯಾಟ್ರಿಕ್ ರನೌಟ್ ಮಾಡಿದ ಮುಂಬೈ ರೋಚಕ ಗೆಲುವಿಗೆ ಸಾಕ್ಷಿಯಾಯಿತು.

19ನೇ ಓವರ್​​ನ 4, 5, 6ನೇ ಎಸೆತಗಳಲ್ಲಿ ಕ್ರಮವಾಗಿ ಅಶುತೋಷ್ ಶರ್ಮಾ, ಕುಲ್ದೀಪ್ ಯಾದವ್, ಮೋಹಿತ್​ ಶರ್ಮಾ ರನೌಟ್ ಆದರು. ಗೆಲ್ಲಲು 15 ರನ್ ಬೇಕಿದ್ದಾಗ ಈ ಮೂರು ರನೌಟ್​ಗಳು ಆಗಿದ್ದು, ಪಂದ್ಯದ ಚಿತ್ರಣವನ್ನೇ ಬದಲಿಸಿತು. ಪರಿಣಾಮ ಡೆಲ್ಲಿ 193ಕ್ಕೆ ಆಲೌಟ್ ಆಯಿತು. ಅಕ್ಷರ್ ನೇತೃತ್ವದ ಡೆಲ್ಲಿ ಇದೇ ಮೊದಲ ಬಾರಿಗೆ ಆರಂಭಿಕ ಐದೂ ಪಂದ್ಯಗಳನ್ನೂ ಗೆದ್ದು ದಾಖಲೆ ಬರೆಯಲು ಸಾಧ್ಯವಾಗಲಿಲ್ಲ. ಆದರೆ 5 ಟ್ರೋಫಿ ಗೆದ್ದಿರುವ ಹಾರ್ದಿಕ್ ನೇತೃತ್ವದ ತಂಡವು ಹ್ಯಾಟ್ರಿಕ್ ಸೋಲಿನಿಂದ ಮತ್ತೊಮ್ಮೆ ಪಾರಾಯಿತು. ಪ್ರಸಕ್ತ ಆವೃತ್ತಿಯಲ್ಲಿ ಮುಂಬೈನ 2ನೇ ಗೆಲುವು ಇದು. ಸೋತ ಡೆಲ್ಲಿ ಅಂಕ ಪಟ್ಟಿಯ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿಯಿತು.

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ತಿಲಕ್ ವರ್ಮಾ (59) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 205 ರನ್ ಪೇರಿಸಿತು. ತಿಲಕ್ ಜೊತೆಗೆ ನಮನ್ ಧೀರ್​ ಕೂಡ ಅದ್ಭುತ ಕಾಣಿಕೆ ನೀಡಿದ್ದಾರೆ. ಕೊನೆಯಲ್ಲಿ ಆತ. ಡೆಲ್ಲಿ ಪರ ವಿಪ್ರಜ್ ನಿಗಮ್ ಮತ್ತು ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಿತ್ತು ಮಿಂಚಿದ್ದಾರೆ. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವು 19 ಓವರ್​​ಗಳಲ್ಲಿ 193 ರನ್​ಗೆ ಆಲೌಟ್ ಆಯಿತು. ಕರುಣ್​​ರ​ ಬಿರುಸಿನ ಅರ್ಧಶತಕ ಸಿಡಿಸಿದರೂ ಗೆಲುವು ಸಾಧ್ಯವಾಗಲಿಲ್ಲ. ಕರಣ್ ಶರ್ಮಾ 3 ವಿಕೆಟ್ ಕಿತ್ತು ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ಕರುಣ್ ಅಬ್ಬರದ ನಡುವೆಯೂ ಮುಂಬೈಗೆ ಗೆಲುವು

ದೇಶೀಯ ಕ್ರಿಕೆಟ್​ನಲ್ಲಿ ರನ್ ಹೊಳೆ ಹರಿಸಿದ್ದ ಕರುಣ್ ನಾಯರ್​, ಇದೀಗ 3 ವರ್ಷಗಳ ನಂತರ ಐಪಿಎಲ್​ನಲ್ಲಿ ಆಡಲು  ಕಣಕ್ಕಿಳಿದ ಅವಕಾಶವನ್ನು ಎರಡೂ  ಕೈಗಳಿಂದ ಬಾಚಿಕೊಂಡಿದ್ದಾರೆ. ಮುಕೇಶ್ ಕುಮಾರ್​​ಗೆ ಬದಲಿಯಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು ಪವರ್​​ ಫುಲ್ ಇನ್ನಿಂಗ್ಸ್ ಆಡಿದ್ದಾರೆ. ಡೆಲ್ಲಿ ಚೇಸಿಂಗ್ ಮಾಡುವ ವೇಳೆ ಇನ್ನಿಂಗ್ಸ್​​ನ ಮೊದಲ ಎಸೆತದಲ್ಲೇ ಜೇಕ್​ ಫ್ರೇಸರ್ ಮೆಕ್​ಗುರ್ಕ್ ಗೋಲ್ಡನ್ ಡಕ್ ಆಗಿ ಹೊರ ನಡೆದರು. ಆಗ ಕಣಕ್ಕಿಳಿದ ಕರುಣ್, ಮುಂಬೈ ಬೌಲರ್​​ಗಳ ಮೇಲೆ ಕರುಣೆಯೇ ಚೆಂಡಾಡಿದರು. ವಿಶ್ವಶ್ರೇಷ್ಠ ಜಸ್ಪ್ರೀತ್ ಬುಮ್ರಾ ಓವರ್​​ಗಳಲ್ಲೂ ರನ್ ಮಳೆ ಸುರಿಸಿದ್ದಾರೆ. 21 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ ಕರುಣ್, ಶತಕದತ್ತ ಮುನ್ನುಗ್ಗುತ್ತಿದ್ದರು.

ಅಭಿಷೇಕ್ ಪೊರೆಲ್ ಜೊತೆಗೆ 2ನೇ ವಿಕೆಟ್​ಗೆ 119 ರನ್​ಗಳ ಜೊತೆಯಾಟವಾಡಿದ ಕರುಣ್ 40 ಎಸೆತಗಳಲ್ಲಿ 12 ಬೌಂಡರಿ, 5 ಸಿಕ್ಸರ್ ಸಹಿತ 89 ರನ್ ಚಚ್ಚಿದರು. ಆದರೆ ಪಂದ್ಯವನ್ನು ಸುಸ್ಥಿತಿಗೆ ತಂದಿಟ್ಟು ಕರುಣ್ ಔಟಾದ. ಇದರೊಂದಿಗೆ ಚೊಚ್ಚಲ ಶತಕ ಸಿಡಿಸುವ ಅವಕಾಶ ಕಳೆದುಕೊಂಡರು. ಅಭಿಷೇಕ್ ಪೊರೆಲ್ ನಿಧಾನವಾಗಿ ಆಡುವ ಮೂಲಕ ಉತ್ತಮವಾಗಿ ಸಾಥ್ ಕೊಟ್ಟರು. ಆದರೆ ಆ ನಂತರ ಕಣಕ್ಕಿಳಿದ ಆಟಗಾರರು ನಿರಾಸೆ ಮೂಡಿಸಿದರು. ಕೆಎಲ್ ರಾಹುಲ್ (15),  ಅಕ್ಷರ್ ಪಟೇಲ್ (9), ಟ್ರಿಸ್ಟಾನ್ ಸ್ಟಬ್ಸ್ (1) ತೀವ್ರ ನಿರಾಸೆ ಮೂಡಿಸಿದರು. ಇದು ಡೆಲ್ಲಿ ತಂಡವನ್ನು ಸಂಕಷ್ಟಕ್ಕೆ ತಂದು ನಿಲ್ಲಿಸಿತು. ಬಳಿಕ ವಿಪ್ರಜ್ ನಿಗಮ್ ಸ್ಟಂಪ್ ಆದರೆ, ಅಶುತೋಷ್ ಶರ್ಮಾ ರನೌಟ್ ಆದರು.

ತಿಲಕ್ ವರ್ಮಾ ಅಬ್ಬರ

ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಉತ್ತಮ ಆರಂಭ ಪಡೆಯಿತು. ಪವರ್​ಪ್ಲೇನಲ್ಲಿ 59 ರನ್ ಬಂದಿತ್ತು. ಆದರೆ ಬಿರುಸಿನ ಆಟಕ್ಕೆ ಕೈ ಹಾಕಿದ್ದ ರೋಹಿತ್​ ಶರ್ಮಾ ಅನಗತ್ಯ ಹೊಡೆತಕ್ಕೆ ಯತ್ನಿಸಿದರು. ಆದರೆ ಚೆಂಡು ಬ್ಯಾಟ್​ಗೆ ತಾಗದೆ ಎಲ್​ಬಿಡಬ್ಲ್ಯು  ಆದರು. ಹಿಟ್​ಮ್ಯಾನ್ 15ಕ್ಕೆ ಆಟ ಮುಗಿಸಿದರು. ಆ ಬಳಿಕ ರಿಯಾನ್ ರಿಕಲ್ಟನ್ (41) ಜೊತೆಯಾದ ಸೂರ್ಯಕುಮಾರ್​ (40) ಕೂಡ ಸ್ಕೋರ್ ಬೋರ್ಡ್​​​ನಲ್ಲಿ ರನ್ ಏರಿಸಿದರು. ಇವರಲ್ಲದೆ, ತಿಲಕ್ ವರ್ಮಾ ಕೊನೆತನಕ ಕ್ರೀಸ್​ನಲ್ಲಿ ಉಳಿದು 200ರ ಗಡಿದಾಟಿಸಲು ನೆರವಾದರು. 33 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಿತ 59 ರನ್ ಗಳಿಸಿದರು. ನಮನ್ ಧೀರ್ ಅಜೇಯ 38 ರನ್ ಕಲೆ ಹಾಕುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಹಾರ್ದಿಕ್ ಪಾಂಡ್ಯ 2 ರನ್ ಗಳಿಸಿ ನಿರಾಸೆ ಮೂಡಿಸಿದರು.

ಪ್ರಸನ್ನಕುಮಾರ್ ಪಿ.ಎನ್.: ‘ಹಿಂದೂಸ್ತಾನ್ ಟೈಮ್ಸ್​​ ಕನ್ನಡ’ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

Whats_app_banner

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!