Latest Kannada Nation & World
ಕರುಳ ಬಂಧಕ್ಕೆ ಕಾನೂನಿನ ಉರುಳು; ಭಾರ್ಗವಿ ಬ್ರಹ್ಮಾಸ್ತ್ರಕ್ಕೆ ತಲೆ ಬಾಗಿದ್ರಾ ಸೀತಾ -ಸಿಹಿ?

ಹೀಗೆ ಬಾಗಿಲು ತೆರೆದು ಇಡುತ್ತಿದ್ದಂತೆ, ಇದನ್ನು ಗಮನಿಸಿದ ಸಿಹಿ, ಮನೆಯಲ್ಲಿನ ಯಾರ ಗಮನಕ್ಕೂ ಬಾರದಂತೆ, ನೇರವಾಗಿ ಸೀತಾ ಮತ್ತು ರಾಮನ ಬಳಿಗೆ ತೆರಳಿದ್ದಾಳೆ. ಸಿಹಿಯನ್ನು ನೋಡಲು ಸೀತಾ ಮತ್ತು ರಾಮ್ ಬರಬೇಕು ಎನ್ನುವಷ್ಟರಲ್ಲಿಯೇ, ಸಿಹಿಯೇ ಬಂದಿದ್ದನ್ನು ನೋಡಿ ಖುಷಿಯಲ್ಲಿದ್ದಾರೆ. ನಾನು ಆ ಮನೆಗೆ ಹೋಗಲ್ಲ ಸೀತಮ್ಮ. ಅಲ್ಲಿ ಊಟಕ್ಕೂ ಏನೂ ಇಲ್ಲ. ಆಟ ಆಡುವುದಕ್ಕೂ ಯಾರೂ ಇಲ್ಲ. ಎಲ್ಲರೂ ಬೈಯುತ್ತಾರೆ ಎಂದು ನೋವನ್ನು ಹೇಳಿಕೊಂಡಿದ್ದಾಳೆ. ಇತ್ತ ಭಾರ್ಗವಿಯ ಪ್ಲಾನ್ ವರ್ಕೌಟ್ ಆಗಿದೆ. ತಮ್ಮ ಪ್ಲಾನ್ನಂತೆ ಸಿಹಿ ಮನೆಯಿಂದ ಓಡಿಹೋಗಿ ಸೀತಾ ಮಡಿಲು ಸೇರಿದ್ದಾಳೆ.