Latest Kannada Nation & World
ಕಲರ್ಸ್ ಕನ್ನಡದಲ್ಲಿ ಆರು ಗಂಟೆಗಳ ಮಹಾ ಮನರಂಜನೆ; ಮಜಾ ಟಾಕೀಸ್ ಟೀಂ ಜತೆ ಬಾಯ್ಸ್ v/s ಗರ್ಲ್ಸ್ ಕಚಗುಳಿ

ಮಜಾ ಟಾಕೀಸ್ ಮತ್ತು ಬಾಯ್ಸ್ ವರ್ಸಸ್ ಗರ್ಲ್ಸ್ ಈ ಎರಡು ಶೋಗಳ “ಮಹಾ ಮಿಲನ” ಕಲರ್ಸ್ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ (ಫೆಬ್ರವರಿ 22, 23) ರಾತ್ರಿ 7:30 ಕ್ಕೆ ಪ್ರಸಾರವಾಗಲಿದೆ. ವೀಕ್ಷಕರಿಗೆ ಅನ್‌ಲಿಮಿಟೆಡ್ ಮಜ ಮತ್ತು ನಾನ್ ಸ್ಟಾಪ್ ಎಂಟರ್‌ಟೈನ್‌ಮೆಂಟ್ ನೀಡಲಿದೆ. ವಾರಾಂತ್ಯದಲ್ಲಿ ಒಟ್ಟು ಆರು ಗಂಟೆಗಳ ಕಾಲ ಅಪರಿಮಿತ ಮಜಾ ಮತ್ತು ಕೊನೆಯೇ ಇಲ್ಲದಂತೆ ನಕ್ಕು ನಗಿಸುವ ಮನರಂಜನೆ ಕೊಡುವ ಈ ’ಮಹಾ ಮಿಲನ’ದಲ್ಲಿ ಅನೇಕ ವಿಶೇಷತೆಗಳಿವೆ.