Latest Kannada Nation & World
ಕಳಪೆ ಫೀಲ್ಡಿಂಗ್, ನಿಧಾನಗತಿಯ ಬ್ಯಾಟಿಂಗ್‌ಗೆ ಬೆಲೆ ತೆತ್ತ ಸಿಎಸ್‌ಕೆಗೆ ಸತತ 4ನೇ ಸೋಲು; ತವರಿನಲ್ಲಿ ಗೆದ್ದು ಮೆರೆದ ಪಂಜಾಬ್

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಆರಂಭದಿಂದಲೇ ವೇಗದ ಆಟಕ್ಕೆ ಮಣೆ ಹಾಕಿತು. ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ, ಅನ್‌ಕ್ಯಾಪ್ಡ್ ಬ್ಯಾಟರ್ ಪ್ರಿಯಾಂಶ್ ಆರ್ಯ ಸ್ಫೋಟಕ ಆಟ ಮುಂದುವರೆಸಿದರು. ಪ್ರಭ್‌ಸಿಮ್ರಾನ್ ಸಿಂಗ್ ಶೂನ್ಯಕ್ಕೆ ನಿರ್ಗಮಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 9 ರನ್ ಗಳಿಸಿ ಸತತ ಎರಡನೇ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರು. ಸ್ಟೋಯ್ನಿಸ್ 4, ನೆಹಾಲ್ ವಧೇರಾ 9 ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ 1 ರನ್ ಗಳಿಸಿ ಔಟಾದರು.