Latest Kannada Nation & World
ಕನ್ನಡದ ಜನಪ್ರಿಯ ನಟರ ಸಿನಿಮಾಗಳ ನಿರ್ದೇಶಕ ಎಸ್ ಉಮೇಶ್ ನಿಧನ

ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಎಸ್ ಉಮೇಶ್ ಅವರು ಇಂದು (ಫೆ 21) ನಿಧನರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದಲೂ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಅವರನ್ನು ಕಾಡುತ್ತಿತ್ತು. ‘ಅವನೇ ನನ್ನ ಗಂಡ’, ‘ನನಗೂ ಹೆಂಡತಿ ಬೇಕು’, ‘ತುಂಬಿದ ಮನೆ’, ‘ರಾಜ ಕೆಂಪು ರೋಜಾ’ಇನ್ನೂ ಕೆಲವು ಸಿನಿಮಾಗಳನ್ನು ಇವರು ನಿರ್ದೇಶಿಸಿದ್ದರು. ಸ್ ಉಮೇಶ್ ಅವರ ಅಂತ್ಯಕ್ರಿಯೆಯನ್ನು ಇಂದು ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ತಿಳಿಸಿದೆ.