Astrology
ಕಾರ್ತಿಕ ಪೂರ್ಣಿಮಾ ದಿನ ಈ ಪರಿಹಾರ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ

ಶಿವನಿಗೆ ಅಭಿಷೇಕ
ಕಾರ್ತಿಕ ಹುಣ್ಣಿಮೆ ದಿನ ಶಿವನ ದೇವಸ್ಥಾನಕ್ಕೆ ಹೋಗಿ ಅಭಿಷೇಕ ಮಾಡುವುದು ತುಂಬಾ ಒಳ್ಳೆಯದು. ಶಿವಲಿಂಗಕ್ಕೆ ಹಾಲು, ಗಂಗಾಜಲ, ಜೇನು, ಮೊಸರು ಮುಂತಾದವುಗಳಿಂದ ಅಭಿಷೇಕ ಮಾಡುವುದರಿಂದ ಜೀವನದಲ್ಲಿನ ತೊಂದರೆಗಳು ದೂರವಾಗುತ್ತವೆ. ನಿಮಗೆ ಶಿವನ ಅನಂತ ಕೃಪೆ ಸಿಗುತ್ತದೆ. ಶಿವನು ಕಾರ್ತಿಕ ಹುಣ್ಣಿಮೆಯಂದು ತ್ರಿಪುರಾಸುರ ಎಂಬ ರಾಕ್ಷಸನನ್ನು ಸಂಹರಿಸಿದನೆಂದು ಪುರಾಣಗಳು ಹೇಳುತ್ತವೆ. ಆದ್ದರಿಂದಲೇ ಇಂದು ಶಿವನ ಆರಾಧನೆಯು ಗಮನಾರ್ಹ ಫಲಿತಾಂಶಗಳನ್ನು ನೀಡುತ್ತದೆ.