Latest Kannada Nation & World
ಮೊಮ್ಮಗಳ ಮುಂದೆ ನಿನ್ನ ಬಂಡವಾಳ ಬಯಲು ಮಾಡ್ತೀನಿ ಎಂದ ಅಜ್ಜಿ ಕತ್ತು ಹಿಸುಕಿದ ಜಯಂತ್: ಲಕ್ಷ್ಮೀ ನಿವಾಸ ಧಾರಾವಾಹಿ

ಅಜ್ಜಿ ಕತ್ತು ಹಿಸುಕಿದ ಜಯಂತ್
ಒಳಗೆ ಕುಳಿತಿರುವ ಅಜ್ಜಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಾರೆ, ನೀನು ಒಳ್ಳೆಯವರು ಎಂದು ಎಲ್ಲರೂ ನಂಬಿದ್ದೆವು, ಇಷ್ಟು ದಿನ ನೀನು ಮುಖವಾಡ ಹಾಕಿ ಬದುಕುತ್ತಿದ್ದೀಯ, ನಿನ್ನ ವಿಚಾರವನ್ನು ಮೊಮ್ಮಗಳಿಗೆ ಹೇಳುತ್ತೇನೆ ಎಂದು ಅಜ್ಜಿ ಹೇಳುತ್ತಾರೆ, ಇದರಿಂದ ಜಯಂತ್‌ಗೆ ಭಯವಾಗುತ್ತದೆ, ಅಜ್ಜಿ ಈ ವಿಚಾರವನ್ನು ಜಾನುಗೆ ಹೇಳಿದರೆ ಅವರು ನನ್ನನ್ನು ಬಿಟ್ಟು ಹೋಗುತ್ತಾರೆ ಎಂದು ಭಯಗೊಂಡು ಅಜ್ಜಿಯ ಕತ್ತು ಹಿಸುಕುತ್ತಾನೆ, ಅಜ್ಜಿ ಪ್ರಜ್ಞೆ ತಪ್ಪಿ ಬೀಳುತ್ತಾರೆ, ಮತ್ತೆ ಜಯಂತ್ ದಿಂಬಿನಿಂದ ಅಜ್ಜಿ ಉಸಿರುಗಟ್ಟಿಸಲು ಪ್ರಯತ್ನಿಸುತ್ತಾನೆ, ಆದರೆ ಹಿಂಜರಿಯುತ್ತಾನೆ, ತಲೆಗೆ ಪೆಟ್ಟು ಬಿದ್ದು ಹೀಗೆ ಆಗಿದೆ ಎಂದು ಎಲ್ಲರೂ ಅಂದುಕೊಳ್ಳುವಂತೆ ಆಗಲಿ ಎಂದು ಮೆಲ್ಲಗೆ ಹೋಗಿ ಮಲಗುತ್ತಾನೆ.