Latest Kannada Nation & World
ಅಣ್ಣಾಜಿ ಮನೆಗೆ ಎಂಟ್ರಿ ಕೊಟ್ಟ ರಾಮಾಚಾರಿ ಅಜ್ಜಿ; ಮುಖ ಮುಖ ನೋಡಿಕೊಂಡು ದಂಗಾಗಿ ನಿಂತ ಮನೆಮಂದಿ

ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿಯ ಇಡೀ ಕುಟುಂಬವೇ ಈಗ ಅಣ್ಣಾಜಿ ಮನೆಯಲ್ಲಿ ನೆಲೆಸಿದಂತಾಗಿದೆ. ಧಾರಾವಾಹಿ ಹೋಗಿ ಕಾಮಿಡಿ ಶೋ ಮಾಡಿಬಿಟ್ರಲ್ಲ ಎಂದು ಜನ ಕಾಮೆಂಟ್ ಮಾಡುತ್ತಿದ್ದಾರೆ. ಏನೇನೋ ಟ್ವಿಸ್ಟ್ ಗಳು ಬರ್ತಾ ಬರ್ತಾ ವಿಚಿತ್ರ ಆಗ್ತಾ ಇದೆ ಎಂದು ಹೇಳುತ್ತಿದ್ದಾರೆ. ಒಂದು ಮನೆಯಿಂದ ಹುಡುಗಿಯನ್ನು ಕರೆದುಕೊಂಡು ಹೋಗಲು ಇಷ್ಟೊಂದು ಜನ ಬೇಕಾ? ಎಂದು ಕೇಳುವಂತಾಗಿದೆ. ಯಾಕೆಂದರೆ ಜಾನಕಿ, ಮುರಾರಿ, ಚಾರು, ರಾಮಾಚಾರಿ, ಶೃತಿ ಮತ್ತೀಗ ಅಜ್ಜಿ. ಇಷ್ಟೊಂದು ಜನ ಈಗ ಅಣ್ಣಾಜಿ ಮನೆಯಲ್ಲಿ ಇದ್ದಾರೆ. ಅಣ್ಣಾಜಿ ಮನೆಯೆಂದರೆ ಅದೊಂದು ತೀರಾ ದುಷ್ಟರಿರುವ ಮನೆ ಎಂದು ಬಿಂಬಿಸಲಾಗಿತ್ತು.