Latest Kannada Nation & World
ಕೆಟ್ಟ ಸಂದೇಶ ಕೊಡುವ ಒಳ್ಳೆಯ ಸಿನಿಮಾ -ಸಂತೋಷ್ ಕುಮಾರ್ ಎಲ್ಎಂ ಬರಹ

ತಿಂಗಳ ಹಿಂದೆ ಬಿಡುಗಡೆಯಾದ ಲಕ್ಕೀ ಭಾಸ್ಕರ್ ತೆಲುಗು ಸಿನಿಮಾಗೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದುಲ್ಕರ್ ಸಲ್ಮಾನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲು ವಿವಿಧ ಹಣಕಾಸು ಹಗರಣಗಳಲ್ಲಿ ಭಾಗಿಯಾಗುತ್ತಾನೆ. ಅಭಿಮಾನಿಗಳ ಕುತೂಹಲ ಹೆಚ್ಚಿಸುತ್ತಾ ಕೊನೆಯವರೆಗೂ ಕೊಂಡೊಯ್ಯುವ ಚಿತ್ರದಲ್ಲಿ, ವೀಕ್ಷಕನಿಗೆ ಯಾವ ಸಂದೇಶವೂ ಇಲ್ಲ ಎಂಬುದು ಪ್ರೇಕ್ಷಕರ ಅಭಿಪ್ರಾಯ. ಸಂತೋಷ್ ಕುಮಾರ್ ಎಲ್ಎಂ ಎಂಬ ಫೇಸ್‌ಬುಕ್ ಬಳಕೆದಾರರೊಬ್ಬರು, ಲಕ್ಕಿ ಭಾಸ್ಕರ್ ಸಿನಿಮಾ ವಿಮರ್ಶೆ ಮಾಡಿದ್ದು, ಇದು ಕೆಟ್ಟ ಸಂದೇಶ ಕೊಡುವ ಒಳ್ಳೆಯ ಸಿನಿಮಾ ಎಂದ ಸರಳವಾಗಿ ವಿವರಿಸಿದ್ದಾರೆ. ಮುಂದಿ ಇರುವುದು ಸಂತೋಷ್ ಕುಮಾರ್ ಬರಹ.